ಮಸ್ಕತ್ ಚ್ಯಾಪ್ಟರ್ ಐಸಿಎಐ ಇದರ ಚೇರಮೆನ್ ಆಗಿ CA ಎನ್ ರಮಾನಂದ ಪ್ರಭು

Spread the love

ಮಸ್ಕತ್ ಚ್ಯಾಪ್ಟರ್ ಐಸಿಎಐ ಇದರ ಚೇರಮೆನ್ ಆಗಿ CA ಎನ್ ರಮಾನಂದ ಪ್ರಭು

ಮಸ್ಕತ್ ಚ್ಯಾಪ್ಟರ್ ಐಸಿಎಐ ಇದರ ಚೇರಮೆನ್ ಆಗಿರುವ CA ಎನ್ ರಮಾನಂದ ಪ್ರಭು ಇವರು ಇತ್ತೀಚೆಗೆ ದೆಹಲಿಯ ಲೀಲಾ ಎಂಬಿಯನ್ಸ್ ಹೋಟೆಲ್ನಲ್ಲಿ ನಡೆದ ಐಸಿಎಐ ನ 71ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಸ್ಕತ್ ಚ್ಯಾಪ್ಟರ್ ಐಸಿಎಐ ನ ಎಲ್ಲಾ ಸದಸ್ಯರ ಪ್ರತಿನಿಧಿಯಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾರ್ಲಿಮೆಂಟ್ ನ ಗೌರವಾನ್ವಿತ ಸದಸ್ಯರಾದ CA ಅರುಣ್ ಸಿಂಗ್ ಹಾಗೂ ಐಸಿಎಐ ನ ಅಧ್ಯಕ್ಷರಾದ CA ಅತುಲ್ ಕುಮಾರ್ ಗುಪ್ತ ಉಪಸ್ಥಿತರಿದ್ದರು.

ಸಂಸತ್ ಸದಸ್ಯರಾದ ಶ್ರೀಯುತ ಬಿ.ವೈ ರಾಘವೇಂದ್ರ ಇವರು CA ಪ್ರಭು ಹಾಗೂ ಅವರ ತಂಡದ ಅನುಕರಣೀಯ ಕೊಡುಗೆ ಹಾಗೂ ಸಾಗರೋತ್ತರ ವೃತ್ತಿಯಲ್ಲಿ ಸೇವೆ ಸಲ್ಲಿಸುವ ಅವರ ಬದ್ಧತೆಯನ್ನು ಶ್ಲಾಘಿಸಿದ್ದಷ್ಟೇ ಅಲ್ಲದೆ ಇದೇ ರೀತಿ ಇವರು ತಮ್ಮ ಸತ್ಕಾರ್ಯ ಗಳನ್ನು ಮುಂದುವರಿಸುವ ಮೂಲಕ ಕನ್ನಡಿಗರು ಹೆಮ್ಮೆಪಡುವಂತಾಗಲಿ ಎಂದು ಆಶಿಸಿದ್ದಾರೆ.

ಜಾಗತಿಕ 43 ದೇಶಗಳ ಒಟ್ಟು 64 ಸಾಗರೋತ್ತರ ಐಸಿಎಐ ನ ಚ್ಯಾಪ್ಟರ್ ಗಳಲ್ಲಿ ಮಸ್ಕತ್ ಚ್ಯಾಪ್ಟರ್ ಐಸಿಎಐ ಅತ್ಯುತ್ತಮ ಚ್ಯಾಪ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮುಖೇನ ಐಸಿಎಐ 2020 ಇದರಿಂದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

CA ರಮಾನಂದ ಪ್ರಭು ಇವರು ಮೂಲತಃ ನಾಯ್ಕನಕಟ್ಟೆಯ ಪ್ರಭುಕೇರಿಯವರಾಗಿದ್ದು , ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇದರ 1990ನೇ ಬ್ಯಾಚ ನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಇವರು ತಮ್ಮ ಸಾಧನೆಗಳ ಮೂಲಕ ಇಡೀ ಬೈಂದೂರಿಗರು ಹೆಮ್ಮೆಪಡುವಂತೆ ಮಾಡಿದ್ದಾರೆ.


Spread the love