ಮಹದೇಶ್ವರ ಬೆಟ್ಟದಲ್ಲಿ ಕೋವಿಡ್ ನಿಯಮ ಮಾಯ

Spread the love

ಮಹದೇಶ್ವರ ಬೆಟ್ಟದಲ್ಲಿ ಕೋವಿಡ್ ನಿಯಮ ಮಾಯ

ಚಾಮರಾಜನಗರ: ಮಲೆ ಮಹದೇಶ್ವರ ದರ್ಶನಕ್ಕೆ ಬಂದ ಭಕ್ತರು ಕೋವಿಡ್ ನಿಯಮವನ್ನು ಗಾಳಿಗೆ ತೂರಿದ್ದು ಮಂಗಳವಾರ ಕಂಡು ಬಂದಿತು.

ಮಹದೇಶ್ವರ ಬೆಟ್ಟ ರಂಗ ಮಂದಿರದೊಳಗೆ ಅಸಂಖ್ಯಾತ ಮಂದಿ ಜಮಾಯಿಸಿದ್ದರು. ಅವರ ಪೈಕಿ ಬಹುತೇಕ ಮಂದಿ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವೂ ಮಾಯವಾಗಿತ್ತು. ಸ್ಯಾನಿಟೈಸಿಂಗ್ ಮಾಡುವ ವಾತಾರವಣ ಅಲ್ಲಿ ಕಂಡು ಬರಲಿಲ್ಲ.

ಮಹದೇಶ್ವರ ದರ್ಶನಕ್ಕಾಗಿ ಒಮ್ಮೆಲೆ ಸಾವಿರಾರು ಮಂದಿ ದೇವರ ದರ್ಶನಕ್ಕೆ ಬಂದಿದ್ದು, ಗುಂಪು ಗುಂಪಾಗಿ ದೇವರ ದರ್ಶನಕ್ಕೆ ಆಗಮಿಸಿದ್ದಾರೆ. ಮಹದೇಶ್ವರ ಬೆಟ್ಟದಲ್ಲಿ ಇಂತಹ ವಾತಾವರಣದಿಂದಾಗಿ ಕೋವಿಡ್ ಸೋಂಕಿತರ ಸಂಖ್ಯೆ ಅಧಿಕವಾಗುವ ಲಕ್ಷಣಗಳಿವೆ ಎಂಬ ಆತಂಕವೂ ಶುರುವಾಗಿದೆ.

ಒಮ್ಮೆಲೆ ಸಾವಿರಾರು ಮಂದಿ ಪ್ರವಾಹದಂತೆ ದೇವಾಲಯಕ್ಕೆ ಬಂದಿದ್ದರಿಂದ ಅವರನ್ನು ನಿಯಂತ್ರಿಸಲು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಸಿಬ್ಬಂದಿ ಹರಸಾಹಸ ಪಡುತ್ತಿದ್ದ ದೃಶ್ಯವೂ ಕಂಡು ಬಂದಿತು


Spread the love