ಮಹಿಳಾ ಕಾಂಗ್ರೆಸ್: ಸೋನಿಯಾ ಗಾಂಧಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ದಿನಸಿ ಸಾಮಾಗ್ರಿ ವಿತರಣೆ 

Spread the love

ಮಹಿಳಾ ಕಾಂಗ್ರೆಸ್: ಸೋನಿಯಾ ಗಾಂಧಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ದಿನಸಿ ಸಾಮಾಗ್ರಿ ವಿತರಣೆ 

ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಯವರ ಜನ್ಮದಿನದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರ ನೇತೃತ್ವದಲ್ಲಿ ಶುಕ್ರವಾರ ಮಂಗಳೂರಿನ ಕುದ್ಕೋರಿ ಗುಡ್ಡ ಕಾಲನಿಯ ಬಡ ಕುಟುಂಬಗಳಿಗೆ ದಿನಸಿ ಸಾಮಾಗ್ರಿ ವಿತರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಅಪ್ಪಿ, ಸುರೇಖಾ ಚಂದ್ರಹಾಸ್, ಮಲ್ಲಿಕಾ ಪಕ್ಕಳ, ಚಂದ್ರಕಲಾ ಡಿ.ರಾವ್, ಬ್ಲಾಕ್ ಅಧ್ಯಕ್ಷರುಗಳಾದ ಶಶಿಕಲಾ ಪದ್ಮನಾಭ್, ಶಾಂತಲಾ ಗಟ್ಟಿ, ಚಂದ್ರಿಕಾ ರೈ, ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಗೀತಾ ಅತ್ತಾವರ್, ಉಷಾ ಶರತ್ ಸುನೀತಾ ಲೋಬೊ, ಗೀತಾ ಪ್ರವೀಣ್ , ವಿದ್ಯಾ, ಕಲಾವತಿ, ರಾಜ್ಯ ಯುವ ಕಾಂಗ್ರೆಸ್ ನ ಕಾರ್ಯದರ್ಶಿ ಆಶಿತ್ ಪಿರೇರಾ, ಯುವ ನಾಯಕ ದೀಕ್ಷಿತ್ ಅತ್ತಾವರ್, ಸ್ಥಳೀಯರಾದ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.


Spread the love