
ಮಹಿಳೆಗೆ ಸುಳ್ಳು ಲೀಸ್ ಪತ್ರದ ಮೂಲಕ ವಂಚನೆ – ಇಬ್ಬರ ಬಂಧನ
ಮಂಗಳೂರು: ಮಹಿಳೆಯೋರ್ವರಿಗೆ ಸುಳ್ಳು ಲೀಸ್ ಎಗ್ರಿಮೆಂಟ್ ಮಾಡಿಕೊಡುವುದರ ಮೂಲಕ ರೂ 5 ಲಕ್ಷ ವಂಚಿಸಿದ ಆರೋಪದ ಮೇಲೆ ಮಂಗಳೂರು ಉತ್ತರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಾವೂರು ನಿವಾಸಿ ದೀಪಕ್ ಸಾವಿಯೊ ಅಂದ್ರಾದೆ (೩೧) ಮತ್ತು ಫಳ್ನಿರ್ ನಿವಾಸಿ ಇಮ್ತೀಯಾಜ್ (೪೩) ಎಂದು ಗುರುತಿಸಲಾಗಿದೆ.
ಮಂಗಳೂರು ಉತ್ತರ ಪೊಲೀಸ್ ಠಾಣೆಯ ಮಹಿಳೆಯೋರ್ವರು ಮಂಗಳೂರಿನ ಕರಂಗಲ್ಪಾಡಿಯಲ್ಲಿರುವ ರಾಧ ಮೆಡಿಕಲ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು 2020 ನೇ ಇಸವಿ ಜೂನ್ ತಿಂಗಳಿನಲ್ಲಿ ಇವರಿಗೆ ಲೀಸ್ ಗೆ ಮನೆ ಹುಡುಕುತ್ತಿದ್ದ ಸಮಯ ಪ್ರದೀಪ್ ಎಂಬುವನು ಕೆ ಎಸ್ ರಾವ್ ರೋಡ್ ನ ಅಪಾರ್ಟಮೆಂಟ್ ಒಂದರಲ್ಲಿ ಪ್ಲಾಟ್ ಖಾಲಿ ಇರುವ ಬಗ್ಗೆ ತೋರಿಸಿ ಈ ಅಪಾರ್ಟಮೆಂಟ್ ನ್ನು 2 ವರ್ಷದ ಅವಧಿಗೆ 5 ಲಕ್ಷಕ್ಕೆ ನಿಗದಿಪಡಿಸಿ ಆರೋಪಿಗಳಿಬ್ಬರೂ ಸೇರಿ ಬ್ರಿಜೇಶ್ ಎಂಬುವನ್ನು ಮನೆಯ ಮಾಲಿಕ ಮಹಮ್ಮದ್ ಅಶ್ರಫ್ ಎಂಬುದಾಗಿ ಕರೆದುಕೊಂಡು ಬಂದು ಅಗ್ರೀಮೆಂಟ್ ಗೆ ಸಹಿ ಮಾಡಿಸಿ 5 ಲಕ್ಷ ಹಣ ಪಡೆದುಕೊಂಡಿರುತ್ತಾರೆ. ನಂತರ ಮಹಿಳೆಯ ಅವರ ಮನೆಯವರೊಂದಿಗೆ ಈ ಪ್ಲಾಟ್ ನಲ್ಲಿ ವಾಸವಿರುವ ಸಮಯ 2021 ನೇ ಇಸವಿ ಫೆಬ್ರವರಿಯಲ್ಲಿ ಮನೆಯ ಒರಿಜಿನಲ್ ಮಾಲಕರಾದ ಮಹಮ್ಮದ್ ಅಲಿ ಎಂಬವರು ಪ್ಲಾಟ್ ಗೆ ಬಂದಾಗ ಆರೋಪಿಗಳು ಮೋಸ ಮಾಡಿರುವ ವಿಚಾರ ಪಿರ್ಯಾದಿದಾರರಿಗೆ ತಿಳಿದಿರುವುದಾಗಿದೆ. ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಪ್ರಕರಣ ದಾಖಲಿರುವುದಾಗಿದೆ.
ಈ ಪ್ರಕರಣದಲ್ಲಿ ದಿನಾಂಕ: 01-02-2022 ರಂದು ಈ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಈ ಆರೋಪಿಗಳು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಇದೇ ರೀತಿಯ ವಂಚನೆಗೆ ಸಂಬಂಧಪಟ್ಟಂತೆ ಮೂರು ಪ್ರಕರಣಗಳಲ್ಲಿ ಒಳಗೊಂಡು ದಸ್ತಗಿರಿಯಾಗಿ ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡವರಾಗಿರುತ್ತಾರೆ.ಅಲ್ಲದೇ ಈ ಆರೋಪಿಗಳು ಬೇರೆ ಬೇರೆ ಕಡೆಗಳಲ್ಲಿ ಇದೇ ರೀತಿಯ ಮೋಸ,ವಂಚನೆ ನಡೆಸಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಐ.ಪಿ ಎಸ್, ಉಪ ಪೊಲೀಸ್ ಆಯುಕ್ತರುಗಳಾದ ಹರಿರಾಮ್ ಶಂಕರ್ ಐ ಪಿ ಎಸ್, ಮತ್ತು ದಿನೇಶ ಕುಮಾರ್ ರವರ ನಿರ್ದೇಶನದಂತೆ ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪಿ ಎ ಹೆಗಡೆ ರವರ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಬೈಂದೂರು ರವರ ನೇತೃತ್ವದಲ್ಲಿ ಪೊಲೀಸ್ ಉಪ ನೀರೀಕ್ಷಕರಾದ ಗುರಪ್ಪ ಕಾಂತಿ ಮತ್ತು ಪೊಲೀಸ್ ಕಾನ್ಸ್ ಟೇಬಲ್ ಗಳಾದ ಮಾದೇವ ಮಾಂಗ್ ಮತ್ತು ಈಶ ಪ್ರಸಾದ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.