ಮಹಿಳೆಯನ್ನು ಹತೈಗೈದ ಹಂತಕರ ಬಂಧನ

Spread the love

ಮಹಿಳೆಯನ್ನು ಹತೈಗೈದ ಹಂತಕರ ಬಂಧನ

ರಾಮನಗರ: ರೈತ ಮಹಿಳೆ ಕೊಲೆ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಕೈಲಾಂಚ ಹೋಬಳಿ ಅಚ್ಚಲು ಕಾಲೋನಿಯ ಬಳಿ ಇತ್ತೀಚೆಗೆ ರೈತ ಮಹಿಳೆ ಕೆಂಪಮ್ಮ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚಲು ಕಾಲೋನಿ ಗ್ರಾಮದ ಲಿಂಗರಾಜು ಮತ್ತು ರವಿ ಬಂಧಿತ ಆರೋಪಿಗಳು.

ಸೆಪ್ಟಂಬರ್ 8ರಂದು ಅಚ್ಚಲು ಫ್ಯಾಕ್ಟರಿಯ ಹಿಂಭಾಗದಲ್ಲಿ ಕೆಂಪಮ್ಮ ಎಂಬುವವರ ಕುತ್ತಿಗೆಗೆ ಪ್ಲಾಸ್ಟಿಕ್ ಹಗ್ಗದಿಂದ ಬಿಗಿದು ಕೊಲೆ ಮಾಡಿ ಮೃತರ ಮೈಮೇಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದರು. ಕೊಲೆ ಪ್ರಕರಣವನ್ನು ಮರೆಮಾಚುವ ಮತ್ತು ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಮೃತ ದೇಹವನ್ನು ಚೀಲದಲ್ಲಿ ಕಟ್ಟಿ ಅರ್ಕಾವತಿ ನದಿಗೆ ಬಿಸಾಡಿ ಪರಾರಿಯಾಗಿದ್ದರು.

ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದ ವೇಳೆ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಆರೋಪಿಗಳಿಂದ ಚಿನ್ನಾಭರಣವನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here