ಮಹಿಳೆಯರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ – ಪ್ರಸಾದ್ ರಾಜ್ ಕಾಂಚನ್

Spread the love

ಮಹಿಳೆಯರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ – ಪ್ರಸಾದ್ ರಾಜ್ ಕಾಂಚನ್

ಉಡುಪಿ: ಬಿಜೆಪಿಯ ಭ್ರಷ್ಠಾಚಾರದಿಂದ ಬೇಸತ್ತಿರುವ ಮಹಿಳೆಯರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.

ಅವರು ಶನಿವಾರ ಉಡುಪಿ ಕಾಂಗ್ರೆಸ್ ಭವನದಲ್ಲಿ ಉಡುಪಿ ಹಾಗೂ ಬ್ರಹ್ಮಾವರ ಬ್ಲಾಕ್ ಜಂಟಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಡುಪಿ ವಿ.ಸಭಾ ಕ್ಷೇತ್ರದ ಮಹಿಳಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.

ಇಂದು ದೇಶದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದು, ಬಿಜೆಪಿಯ ಭ್ರಷ್ಠಾಚಾರ ಬೆಲೆ ಏರಿಕೆಗಳಿಂದ ಬೇಸತ್ತು ಹೋಗಿದ್ದಾರೆ. ಈ ಬಾರಿ ಮಹಿಳೆಯರಿಗಾಗಿ ಪಕ್ಷ ಅತ್ಯುತ್ತಮ ಯೋಜನೆಗಳನ್ನು ತರಲು ನಿರ್ಧರಿಸಿದ್ದು ಮಹಿಳೆಯರು ಬಿಜೆಪಿ ಸರಕಾರವನ್ನು ಬದಲಾಯಿಸಬೇಕು ಎನ್ನು ಆಶಯದಲ್ಲಿ ಇದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಒಟ್ಟಾಗಿ ಬೆಳೆಯೋಣ-ಬಾಳೋಣ, ಯಾರನ್ನೂ ಧ್ವೇಷಿಸದೆ ಶಾಂತಿಯಿಂದ ಇರೋಣ. ಇದು ಉಪನಿಷತ್ತು ಹಾಗೂ ನಮ್ಮ ಸಂಸ್ಕೃತಿ, ಕಾಂಗ್ರೆಸ್ ನ ಆಡಳಿತದ ನೀತಿಯೂ ಇದೇ ಆಗಿದೆ ಎಂದರು

ಈ ಸಂಧರ್ಭದಲ್ಲಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮೈಸೂರು ವಿಭಾಗದ ಉಸ್ತುವಾರಿಗಳಾದ ನಿಧಿ ಚರ್ತುವೇದಿ ˌ ಉಡುಪಿ ಚಿಕ್ಕಮಗಳೂರು,ಲೋಕಸಭಾ ಕ್ಷೇತ್ರದ ವೀಕ್ಷಕರಾದ ಸುದರ್ಶನ, ಕೌಶಿಕ್ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಹಿರಿಯ ಕಾಂಗ್ರೆಸ್ ನಾಯಕಿ ಸರಳಾ ಕಾಂಚನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಗೀತಾ ವಾಗ್ಲೆ, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ಅಧ್ಯಕ್ಷೆ ಮಮತಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಕಾಂಗ್ರೆಸ್ ಮುಖಂಡರಾದ ಅಮೃತ್ ಶೆಣೈ, ವೆರೋನಿಕ ಕರ್ನೇಲಿಯೋ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.


Spread the love