ಮಾಜಿ ಪ್ರಧಾನಿ ನೆಹರು ಅವರ ಪ್ರತಿಮೆ ಅನಾವರಣ

Spread the love

ಮಾಜಿ ಪ್ರಧಾನಿ ನೆಹರು ಅವರ ಪ್ರತಿಮೆ ಅನಾವರಣ

ಬೆಂಗಳೂರು: ವಿಧಾನಸೌಧ ಮುಂಭಾಗದಲ್ಲಿ ಪುನರ್ ಸ್ಥಾಪನೆಗೊಂಡಿರುವ ಭಾರತದ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಅನಾವರಣಗೊಳಿಸಿದರು ̤

ಈ ವೇಳೆ ಮಾತನಾಡಿದ ಅವರು, ದೇಶ ಕಂಡ ಮೊದಲ ಪ್ರಧಾನಿ ನೆಹರು ನವಭಾರತ ನಿರ್ಮಾಣ ಮಾಡಿದಂತವರು. ಇವರು ಮಾಹಾತ್ಮ ಗಾಂಧಿ, ಮುಂತಾದ ಮಹನೀಯರ ಜೊತೆ ನಿಕಟ ಸಂಪರ್ಕ ಹೊಂದಿದವರು. ಆಧುನಿಕ ಭಾರತದ ಕೈಗಾರಿಕೆಗಳ ಅಭಿವೃದ್ಧಿಗೆ ನಾಂದಿ ಹಾಕಿದರು ಎಂದರು

ಇದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್. ಬಿಬಿಎಂಪಿ ಆಯುಕ್ತರಾದ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಪ್ರಸಾದ್ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು


Spread the love