ಮಾಜಿ ಪ್ರೇಯಸಿಯ ಜೊತೆಗಿದ್ದ ಯುವಕನಿಗೆ ಹಲ್ಲೆ ನಡೆಸಿದ ಮಾಜಿ ಪ್ರಿಯಕರ 

Spread the love

ಮಾಜಿ ಪ್ರೇಯಸಿಯ ಜೊತೆಗಿದ್ದ ಯುವಕನಿಗೆ ಹಲ್ಲೆ ನಡೆಸಿದ ಮಾಜಿ ಪ್ರಿಯಕರ 

ಮಂಗಳೂರು: ತನ್ನ ಮಾಜಿ ಪ್ರೇಯಸಿಯ ಜೊತೆಗಿದ್ದ ಯುವಕನಿಗೆ ಆಕೆಯ ಮಾಜಿ ಪ್ರಿಯಕರನ ತಂಡ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಹೋಟೆಲ್ನಲ್ಲಿ ನಡೆದಿದೆ. ಪ್ರತೀಕ್ಷ್ ಎಂಬಾತನಿಗೆ ತ್ರಿಶೂಲ್ ಮತ್ತು ಗ್ಯಾಂಗ್ ಹಲ್ಲೆ ನಡೆಸಿದ್ದಾರೆ ಮಾಡಿದ್ದಾರೆ.

ಯುವತಿ ತನ್ನ ಇಬ್ಬರು ಸ್ನೇಹಿತರ ಜೊತೆ ಮಂಗಳೂರಿನ ಹೋಟೆಲ್ಗೆ ಬಂದಿದ್ದರು. ಈ ವೇಳೆ ಆಕೆಯ ಮಾಜಿ ಪ್ರಿಯಕರ ತ್ರಿಶೂಲ್ ಮತ್ತು ಹೆಲ್ಮೆಟ್ ಧರಿಸಿದ್ದ ಆತನ ಗ್ಯಾಂಗ್ ಏಕಾಏಕಿ ಹೋಟೆಲ್ಗೆ ನುಗ್ಗಿ ಹೆಲ್ಮೆಟ್ನಿಂದ ಮಾಜಿ ಪ್ರೇಯಸಿ ಜೊತೆಗಿದ್ದ ಪ್ರತೀಕ್ಷ್ ಎಂಬಾತನ ಮೇಲೆ ದಾಳಿ ನಡೆಸಿದ್ದಾರೆ.

2 ದಿನಗಳ ಹಿಂದೆ ನಡೆದಿರುವ ಘಟನೆ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರತೀಕ್ಷ್ ಚಿಕಿತ್ಸೆ ಪಡೆಯುತ್ತಿದ್ದಾರೆ.


Spread the love