ಮಾಜಿ ಸಚಿವ ಸೊರಕೆ, ಎಮ್‌ ಬಿ ಪಾಟೀಲ್‌ ಸೇರಿದಂತೆ ಹಲವು ನಾಯಕರಿಂದ ಆಸ್ಕರ್‌ ಆರೋಗ್ಯ ವಿಚಾರಣೆ

Spread the love

ಮಾಜಿ ಸಚಿವ ಸೊರಕೆ, ಎಮ್‌ ಬಿ ಪಾಟೀಲ್‌ ಸೇರಿದಂತೆ ಹಲವು ನಾಯಕರಿಂದ ಆಸ್ಕರ್‌ ಆರೋಗ್ಯ ವಿಚಾರಣೆ

ಮಂಗಳೂರು: ಮಾಜಿ ಕೇಂದ್ರ ಸಚಿವ,ರಾಜ್ಯಸಭಾ ಸದಸ್ಯರಾದ  ಆಸ್ಕರ್ ಫೆರ್ನಾಂಡಿಸ್ ರವರು ಚಿಕಿತ್ಸೆ ಪಡೆಯುತ್ತಿರುವ ಮಂಗಳೂರು ಎನಪೋಯ ಆಸ್ಪತ್ರೆಗೆ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಎಚ್‌ ಕೆ ಪಾಟೀಲ್‌, ಎಮ್‌ ಬಿ ಪಾಟೀಲ್‌ ಸಹಿತ ಹಲವಾರು ನಾಯಕರು ಭೇಟಿ ಆರೋಗ್ಯ ವಿಚಾರಿಸಿದರು.

ಈ ವೇಳೆ  ನಾಯಕರು ಕುಟುಂಬದ ಸದಸ್ಯರು ಹಾಗೂ ಆಸ್ಪತ್ರೆಯ ವೈದ್ಯರೊಂದಿಗೆ ಆಸ್ಕರ್‌ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ವೇಳೆ ಎಐಸಿಸಿ ಸದಸ್ಯರಾದ ಪಿ ವಿ.ಮೋಹನ್, ಮಾಜಿ ಶಾಸಕರಾದ ಅಭಯಚಂದ್ರ ಜೈನ್‌, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ, ಎಂ.ಎ ಗಪೂರ್, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಹಾಗೂ ಕಾಂಗ್ರೆಸ್ ಪಕ್ಷದ ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಕೆ.ಕೃಷ್ಣಮೂರ್ತಿ ಆಚಾರ್ಯ,ಉಡುಪಿ ನಗರಸಭಾ ಮಾಜಿ ಅಧ್ಯಕ್ಷರಾದ ಯುವರಾಜ್ ಪುತ್ತೂರು, ನಾಯಕರಾದ ಯತೀಶ್‌ ಕರ್ಕೇರಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Leave a Reply