ಮಾಡುವ ಕೆಲಸದಲ್ಲಿ ನಂಬಿಕೆ, ನಿರಂತರ ಕಲಿಕೆ, ತಾಳ್ಮೆ ಇದ್ದರೆ ಯಶಸ್ಸು ಸಾಧ್ಯ – ಜಯಪ್ರಕಾಶ್ ಹೆಗ್ಡೆ

Spread the love

ಮಾಡುವ ಕೆಲಸದಲ್ಲಿ ನಂಬಿಕೆ, ನಿರಂತರ ಕಲಿಕೆ, ತಾಳ್ಮೆ ಇದ್ದರೆ ಯಶಸ್ಸು ಸಾಧ್ಯ – ಜಯಪ್ರಕಾಶ್ ಹೆಗ್ಡೆ

ಕುಂದಾಪುರ: ಮಾಡುವ ಕೆಲಸದಲ್ಲಿ ನಂಬಿಕೆ, ನಿರಂತರ ಕಲಿಕೆ, ತಾಳ್ಮೆ, ಅಪಾರ ಶ್ರದ್ದೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧ್ಯವಿದೆ. ಇವತ್ತಿನ ಕಾಲಘಟ್ಟಕ್ಕೆ ವಿದ್ಯಾರ್ಥಿಗಳಿಗೆ ವ್ಯವಹಾರ ಕ್ಷೇತ್ರವನ್ನು ಪರಿಚಯಿಸುವ ನಿಟ್ಟಿನಲ್ಲಿ ಬಿಸಿನೆಸ್ ಡೇ ಕಾರ್ಯಕ್ರಮ ಪ್ರಸ್ತುತ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ವೆಂಕಟರಮಣ ಆಂಗ್ಲ ಮಾಧ್ಯಮ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಶನಿವಾರ ನಡೆದ “ವ್ಯಾಪಾರ ಮೇಳ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ, ರಾಜ್ಯದ ಆರ್ಥಿಕ ಸುಧಾರಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಜವಬ್ದಾರಿ ಮುಖ್ಯವಾದುದು. ವಾಣಿಜ್ಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು ಅದರ ಸದ್ಭಳಕೆ ಮಾಡಿಕೊಳ್ಳಬೇಕು. ಒಂದು ಉತ್ಪನ್ನವನ್ನು ಪರಿಣಾಮಕಾರಿಯಾಗಿ ಗ್ರಾಹಕನ ಮುಂದೆ ಇಡುವುದು, ಮೌಲ್ಯವರ್ಧನೆ ಮಾಡುವುದು, ಮಾರುಕಟ್ಟೆಯ ಕೌಶಲ್ಯಗಳನ್ನು ಕರಗತ ಮಾಡಿಕೊಂಡು ತಾಳ್ಮೆಯಿಂದ ಮುಂದುವರಿದರೆ ಯಶಸ್ವಿಯಾಗಲು ಸಾಧ್ಯವಿದೆ ಎಂದರು.

ಶಿಕ್ಷಣ ಹಂತವನ್ನು ಪೂರೈಸುವ ಹಂತದಲ್ಲಿಯೇ ನಮ್ಮ ಭವಿಷ್ಯದ ಯೋಜನೆಗಳನ್ನು ಸ್ವಯಂ ರೂಪಿಸುವ ಬದ್ಧತೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಹೊಂದಿರಬೇಕು. ಪೆÇೀಷಕರ ನೆರಳಿನ ಆಶ್ರಯದಿಂದ ಹೊರ ಬಂದು ಸ್ವತಂತ್ರ ಜೀವನವನ್ನು ಕಟ್ಟಿಕೊಳ್ಳುವ ಹಾಗೂ ಬದುಕನ್ನು ರೂಪಿಸುವ ಬಗ್ಗೆ ಸ್ವಷ್ಟತೆ ಇರಬೇಕು. ಸಂವಹನ ಶಕ್ತಿಯ ಮೇಲೆ ಕಾಪೆರ್Çೀರೇಟ್ ಉದ್ಯೋಗಗಳು ಕೇಂದ್ರಿಕೃತವಾಗಿದ್ದರೇ, ವಯಕ್ತಿಯ ಸಾಮರ್ಥ್ಯ ಹಾಗೂ ಆಸಕ್ತಿಯ ಮೇಲೆ ವ್ಯವಹಾರಗಳು ಯಶಸ್ಸಾಗುತ್ತದೆ. ವ್ಯವಹಾರವನ್ನು ಮಾಡಿದ ಎಲ್ಲರೂ ಯಶಸ್ಸು ಗಳಿಸುತ್ತಾರೆ ಎನ್ನವುದನ್ನು ಒಪ್ಪಲಾಗುದಿಲ್ಲ. ವ್ಯವಹಾರದ ದೃಷ್ಟಿಕೋನ, ಸಂಪನ್ಮೂಲ ಸಂಗ್ರಹ, ಮಾರುಕಟ್ಟೆ, ಅನುಭವ, ಮಾರ್ಗದರ್ಶನ, ಗ್ರಾಹಕರ ಆಕರ್ಷಣೆ ಹಾಗೂ ನಿಯಮಿತ ವ್ಯವಹಾರಿಕಾ ಜ್ಞಾನದ ಪರಿಪಕ್ವತೆ ಹೊಂದಿದವರು ಮಾತ್ರ ಯಶಸ್ಸಾಗುತ್ತಾರೆ. ಯವುದೇ ವ್ಯವಹಾರಕ್ಕೂ ಕೊನೆ ಎನ್ನುವುದಿಲ್ಲ, ನಮ್ಮ ಗುರಿಯ ನಿರ್ದಿಷ್ಟತೆ ತಲುಪುವರೆಗೂ ಪರಿಶ್ರಮ ತೋರಬೇಕು ಎಂದರು.

ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ಬಿ.ಪಿ.ವರದರಾಯ್ ಪೈ ಮಾತನಾಡಿದರು. ವೆಂಕಟರಮಣ ಎಜುಕೇಶನಲ್ ಎಂಡ್ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಕೆ.ರಾಧಾಕೃಷ್ಣ ಶೆಣೈ, ಟ್ರಸ್ಟಿ ರತ್ನಾಕರ ಶೆಣೈ, ವೆಂಕಟರಮಣ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೃಷ್ಣ ಅಡಿಗ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ರೇಷ್ಮಾ ಡಿಸೋಜಾ, ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರಮೀಳಾ ಡಿಸೋಜಾ ಇದ್ದರು.

ವೆಂಕಟರಮಣ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ರಾಗಿಣಿ ಸ್ವಾಗತಿಸಿದರು, ವಾಣಿಜ್ಯ ವಿಭಾಗ ಮುಖ್ಯಸ್ಥೆ ಕವಿತಾ ರಮೇಶ್ ಪ್ರಾಸ್ತಾವಿಕ ಮಾತನಾಡಿದರು, ಉಪನ್ಯಾಸಕರಾದ ಮಂಜುನಾಥ, ಶಶಾಂಕ್ ಎಸ್. ನಾಯಕ್, ವರದರಾಜ ಪೈ ಪರಿಚಯಿಸಿದರು, ಕನ್ನಡ ಉಪನ್ಯಾಸಕಿ ಸುನೀತಾ ಜಗದೀಶ್ ಶೆಟ್ಟಿ ನಿರೂಪಿಸಿದರು, ವಾಣಿಜ್ಯ ಉಪನ್ಯಾಸಕ ವಿಶ್ವೇಶ್ ನಾಯಕ್ ವಂದಿಸಿದರು.

ಸಂಸ್ಥೆಯ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತೆರೆದಿದ್ದ ಮಳಿಗೆಗಳಲ್ಲಿ ವಿವಿಧ ಮಾರಾಟ ವಸ್ತುಗಳನ್ನು ಇಟ್ಟು, ವಿದ್ಯಾರ್ಥಿಗಳು ಭರ್ಜರಿ ವ್ಯಾಪಾರ ನಡೆಸಿದರು.


Spread the love

Leave a Reply

Please enter your comment!
Please enter your name here