Home Mangalorean News Kannada News ಮಾತೆ ಶ್ರೀ ಪದ್ಮಾವತಿ ದೇವಿ ಸಹಸ್ರಾಷ್ಟನಾಮಾವಳಿಯೊಂದಿಗೆ ಕುಂಕುಮಾರ್ಚನೆ

ಮಾತೆ ಶ್ರೀ ಪದ್ಮಾವತಿ ದೇವಿ ಸಹಸ್ರಾಷ್ಟನಾಮಾವಳಿಯೊಂದಿಗೆ ಕುಂಕುಮಾರ್ಚನೆ

Spread the love

ಮಾತೆ ಶ್ರೀ ಪದ್ಮಾವತಿ ದೇವಿ ಸಹಸ್ರಾಷ್ಟನಾಮಾವಳಿಯೊಂದಿಗೆ ಕುಂಕುಮಾರ್ಚನೆ

ಧರ್ಮಸ್ಥಳ: ಧರ್ಮಸ್ಥಳದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲ್ಲಿ 10ನೇ ಅಕ್ಟೋಬರ್ 2016ರಂದು ನವರಾತ್ರಿಯ ಸಂದರ್ಭದಲ್ಲಿ ಕ್ಷುಲ್ಲಕ 105 ಜಿನಕೀರ್ತಿ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಮಾತೆ ಶ್ರೀ ಪದ್ಮಾವತಿ ದೇವಿ ಸಹಸ್ರಾಷ್ಟನಾಮಾವಳಿಯೊಂದಿಗೆ ಕುಂಕುಮಾರ್ಚನೆ ಪೂಜೆ ನಡೆಯಿತು.

dharmastala-kunkumarchane

ತದನಂತರ ಪೂಜೆಯಲ್ಲಿ ಭಾಗವಹಿಸಿದ ಎಲ್ಲಾ ಶ್ರಾವಿಕೆಯರಿಗೆ ಉಡಿತುಂಬಿಸಲಾಯಿತು. ಈ ಸಂದರ್ಭದಲ್ಲಿ ಡಿ.ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಶ್ರೀ ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಶ್ರುತಜಿತೇಶ್, ಸಂಹಿತಾ ಶ್ರೇಯಸ್, ನಿಶ್ಚಲ್ ಕುಮಾರ್, ಪ್ರಸನ್ನಕುಮಾರ್ ಮೊದಲಾದವರು ಉಪಸ್ಥಿತರಿದ್ದು, ನೂರಾರು ಶ್ರಾವಕ ಶ್ರಾವಕಿಯರು ಕುಂಕುಮಾರ್ಚನೆಯಲ್ಲಿ ಭಾಗವಹಿಸಿ ಪುಣ್ಯಭಾಗಿಗಳಾದರು.


Spread the love

Exit mobile version