ಮಾದಕ ವಸ್ತು ‘ಎಂಡಿಎಂಎನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಕಾವೂರು ಪೊಲೀಸರು

Spread the love

ಮಾದಕ ವಸ್ತು ‘ಎಂಡಿಎಂಎನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಕಾವೂರು ಪೊಲೀಸರು

ಮಂಗಳೂರು: ನಗರ ಹೊರವಲಯದ ಪಡುಶೆಡ್ಡೆ ಗ್ರಾಮದ ಮೂಡುಶೆಡ್ಡೆಯ ಬಳಿ ಮಾದಕ ವಸ್ತು ‘ಎಂಡಿಎಂಎನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕಾವೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಆರೋಪಿಗಳನ್ನು ಪಿಲಿಕುಳ ಸಮೀಪದ ನಿವಾಸಿ ಶಾರೂಕ್ (27) ಮತ್ತು ತೋಕೂರಿನ ಜಗದೀಶ್ (45) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 4.5 ಗ್ರಾಂ ಎಂಡಿಎಂಎ, ಮೂರು ಮಾರಕ ಆಯುಧಗಳು, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಲಾಗಿದೆ. ಇದರ ಮೌಲ್ಯ 441,700 ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಗಳು ಮೂಡುಶೆಡ್ಡೆಗೆ ಹೋಗುವ ದಾರಿಯಲ್ಲಿ ನಿಂತು ‘ಎಂಡಿಎಂಎ’ಯನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಕಾವೂರು ಠಾಣೆಯ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಪರಿಶೀಲಿಸಿದಾಗ ಕಾರಿನಲ್ಲಿ ಮಾರಕ ಆಯುಧಗಳು ಕೂಡ ಕಂಡು ಬಂದಿವೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಎಂ.ಡಿ.ಎಂ.ಎ ಮಾರಾಟ ಹಾಗೂ ಮಾರಕ ಆಯುಧಗಳ ಶಸ್ತ್ರಾಸ್ತ್ರ ಹೊಂದಿರುವವರನ್ನು ಬಂಧಿಸುವ ಕಾರ್ಯದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರು ಮಂಗಳೂರು ರವರ ನಿರ್ದೆಶನದಂತೆ. ಈ ಕಾರ್ಯಾಚರಣೆಯನ್ನು  ಡಿ.ಸಿ.ಪಿ (ಕಾ&ಸು) ಮತ್ತು ಡಿ.ಸಿ.ಪಿ (ಅಫರಾದ ಮತ್ತು ಸಂಚಾರ) ರವರ ಮಾರ್ಗದರ್ಶನದಲ್ಲ. ಮಂಗಳೂರು ನಗರದ ಉತ್ತರ ಉಪ-ವಿಭಾಗದ ಎಸಿಪಿ ರವರಾದ ಮನೋಜ್ ಕುಮಾರ್, ರವರ ನೇತೃತ್ವದಲ್ಲಿ ಕಾವೂರು ಪೊಲೀಸ್ ನಿರೀಕ್ಷಕರಾದ ಗುರುರಾಜ್ ಮತ್ತು ಪಿ.ಎಸ್.ಐ ಮಲ್ಲಿಕಾರ್ಜುನ ಬಿರಾದಾರ ಹಾಗೂ ಸಿಬ್ಬಂದಿಯವರಾದ ತಾರಾನಾಥ ಪುತ್ರನ್, ಕಿಶೋರ್, ಸಂಭಾಜಿ, ಲತೇಶ್ವರು ಪಾಲ್ಗೊಂಡಿದ್ದರು.


Spread the love