ಮಾದಕ ವಸ್ತು ಚರಸ್ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ

Spread the love

ಮಾದಕ ವಸ್ತು ಚರಸ್ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ

ಮಂಗಳೂರು: ಆಡಿ ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಚರಸ್ ಸಾಗಾಟ ಪ್ರಕರಣವೊಂದನ್ನು ಭೇದಿಸಿರುವ ಬಚ್ಚಿ ರಾಜಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಸುರತ್ಕಲ್ ಸೂರಿಂಜೆಯ ಕಿನ್ನಿಗುಡ್ಡೆ ನಿವಾಸಿ ಅಬ್ದುಲ್ ಅಝೀಝ್ (34) ಬಂಧಿತ ಆರೋಪಿ, ಈತನಿಂದ 230.4 ಗ್ರಾಂ ತೂಕದ ಚರಸ್ ಹಾಗೂ ಸಾಗಾಟಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ನಿಂಗ್ ಸ್ಟಾರ್ ಶಾಲೆಯ ಬಳಿ ಅ.1ರಂದು ಮುಂಜಾವ 3:15ರ ಸುಮಾರಿಗೆ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ಬರುತ್ತಿದ್ದ ಕಾರನ್ನು ಪೊಲೀಸರು ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಅದರ ಚಾಲಕ ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿದ್ದಾನೆ ಬಳಿಕ ಕಾರನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿದಾಗ 230.4 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತು ಚರಸ್ ಪತ್ತೆಯಾಗಿದೆ. ಕಾರು ಹಾಗೂ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಇನ್ನಿತರ ಆರೋಪಿತರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾರ್ಗದರ್ಶನದಂತೆ ಡಿಸಿಪಿ ಅಂಶು ಕುಮಾರ್ ಮತ್ತು ದಿನೇಶ್ ಕುಮಾರ್ ಡಿಸಿಪಿ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ ನಿರ್ದೇಶನದಂತೆ ಬಜ್ಜೆ ಪೊಲೀಸ್ ಠಾಣಾ ಪಿ.ಐ. ಪ್ರಕಾಶ್ ನೇತ್ರತ್ವದ ತಂಡ ಪಾಲ್ಗೊಂಡಿತ್ತು.


Spread the love