ಮಾದಕ ವಸ್ತು ಮಾರಾಟ; ಕೇರಳ ಮೂಲದ ಯುವಕನ ಬಂಧನ

Spread the love

ಮಾದಕ ವಸ್ತು ಮಾರಾಟ; ಕೇರಳ ಮೂಲದ ಯುವಕನ ಬಂಧನ

ಮಂಗಳೂರು: ಮಾದಕ ವಸ್ತು ಎಲ್ ಎಸ್ ಡಿ ಮಾರುತ್ತಿದ್ದ ಕೇರಳ ಮೂಲದ ಯುವಕನೋರ್ವನನ್ನು ಮಂಗಳೂರು ಪೊಲೀಸರು ಗುರುವಾರ   ಬಂಧಿಸಿದ್ದಾರೆ.

ಕೇರಳದ ಮೊಹಮ್ಮದ್ ಅಜಿನಾಸ್ ( ವ.25) ಬಂಧಿತ ಆರೋಪಿ.

ಈತನಿಂದ 16.80 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಎಲ್ ಎಸ್ ಡಿ ಸ್ಟಾಂಪ್, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಬೈಕ್ ಹಾಗೂ ಎರಡು ಮೊಬೈಲ್ ನ್ನು ವಶಕ್ಕ ಪಡೆಯಲಾಗಿದೆ.

ಆರೋಪಿ ಮೊಹಮ್ಮದ ಅಜಿನಾಸ್ ಮಂಗಳೂರು ನಗರದ ಕದ್ರಿ ಮೈದಾನದ ಬಳಿ ಗ್ರಾಹಕರಿಗಾಗಿ ಕಾಯುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್ ಐ ಪ್ರದೀಪ್ ಟಿ.ಆರ್ ಮತ್ತು ಸಿಬ್ಬಂದಿಯವರು ಆರೋಪಿಯನ್ನು ಬಂಧಿಸಿದ್ದಾರೆ.


Spread the love

Leave a Reply

Please enter your comment!
Please enter your name here