ಮಾನವ ಸಂಬಂಧಗಳನ್ನು ಗೌರವಿಸಲು ಪ್ರೇರೆಪಿಸುವ ಮೊಂತಿ ಹಬ್ಬ – ಬಿಷಪ್‌ ಪೀಟರ್‌ ಪಾವ್ಲ್‌ ಸಲ್ಡಾನಾ 

Spread the love

ಮಾನವ ಸಂಬಂಧಗಳನ್ನು ಗೌರವಿಸಲು ಪ್ರೇರೆಪಿಸುವ ಮೊಂತಿ ಹಬ್ಬ – ಬಿಷಪ್‌ ಪೀಟರ್‌ ಪಾವ್ಲ್‌ ಸಲ್ಡಾನಾ 

ಪ್ರಿಯರೇ ನಿಮಗೆಲ್ಲರಿಗೂ ಮಾತೆ ಮರಿಯಮ್ಮನವರ ಜನುಮದಿನದ ಶುಭಾಶಯಗಳು. ಸಪ್ಟೆಂಬರ್ 08 ರಂದು ಆಚರಿಸುವ ಈ ಹಬ್ಬವು ಕರ್ನಾಟಕ ಕರಾವಳಿಯ ಕ್ರೈಸ್ತರಿಗೆ ಪ್ರತ್ಯೇಕವಾಗಿ ಕೊಂಕಣಿ ಭಾಷಿಗರಿಗೆ ಅತಿ ಪ್ರೀತಿಯದ್ದಾಗಿದೆ. ನಾವು ಈ ಹಬ್ಬವನ್ನು ‘ಮೊಂತಿ ಫೆಸ್ತ್’ ಅಂತ ಕರೆಯುತ್ತೇವೆ. ಕೊಂಕಣಿ ಸಂಸ್ಕøತಿಯು ಇದರಲ್ಲಿ ಅಡಕವಾಗಿದೆ. ಈ ಹಬ್ಬದ ವಿಷೇಶತೆ ಹೊಸತನದಿಂದ ಕೂಡಿರುವುದಾಗಿದೆ. ಕುಟುಂಬದ ಹಬ್ಬ ಇದಾಗಿದ್ದು, ಹೆಣ್ಣುಮಗುವಿಗೆ ವಿಶೇಷ ಗೌರವವನ್ನು ಕೊಡಲು ಪ್ರೇರೇಪಿಸುವಂತಹದ್ದಾಗಿದೆ. ಇದರ ಜೊತೆಗೆ ಹೊಸ ತೆನೆಯನ್ನು ತಂದು ಆಶೀರ್ವದಿಸಿ ವಿವಿಧ ಬಗೆಯ ತರಕಾರಿಯನ್ನು ಆಸ್ವಾದಿಸಿ ಸಂತೋಷಪಡುತ್ತೇವೆ. ಚಿಕ್ಕ ಮಕ್ಕಳ ಮೊಗದಲ್ಲಿ ಮುಗುಳ್ನಗೆ ಮೂಡಿಸುವ ಹಬ್ಬ ಇದಾಗಿದೆ. ಕಾರಣ ಈ ಹಬ್ಬದ ಸಿದ್ಧತೆಯ ದಿನಗಳಲ್ಲಿ ಮಕ್ಕಳು ತಾವೇ ತೋಟ ಹಿತ್ತಲು ಸುತ್ತಿ ಹೂವುಗಳನ್ನು ಆರಿಸಿ ತಂದು ಕಂದ ಮರಿಯಳಿಗೆ ಆರ್ಪಿಸುತ್ತಾರೆ.

“ನಮಗೊಂದು ಹೆಣ್ಣು ಮಗು ಜನಿಸಿದೆ. ಮುಂದೆ ದೇವಪುತ್ರನನ್ನೇ ಧರೆಗೆ ತರಲು ತಂದೆಯಾದ ದೇವರು ಮರಿಯಳನ್ನು ಆರಿಸಿ, ಅವಳ ಮುಖಾಂತರ ಲೋಕ ರಕ್ಷಕನನ್ನು ನಮಗೆ ಕೊಡುತ್ತಾರೆ. ಈ ಹೆಣ್ಣುಮಗು ಇದೇ ಮಾನವ ಕುಲದ ತಾಯಿ ಎಂದು ನಾವು ಕ್ರೈಸ್ತರು ನಂಬುವಂತೆ ಮಾಡುವ ಸಂದೇಶ ಈ ಹಬ್ಬ ನಮಗೆ ನೀಡುತ್ತದೆ. ಏಕೆಂದರೆ ವಿಶ್ವಾಸಿಗಳಲ್ಲಿ ಅತೀ ಶ್ರೇಷ್ಟಳು ಈಕೆ.

ಪ್ರಕ್ರತಿಯ ರಕ್ಷಣೆ, ಹೆಣ್ಣುಮಗುವಿಗೆ ಗೌರವ, ಕುಟುಂಬದ ಏಕತೆ, ಭೂಮಿಯ ಫಲವತ್ತತೆ ಎಲ್ಲವನ್ನು ಸಾರುವ ಮರಿಯ ಜಯಂತಿಯು ನಮಗೆಲ್ಲರಿಗೂ ಸಂತೋಷದ ಕಾರಣವಾಗಲಿ ಎಂದು ಆಶಿಸುತ್ತೇನೆ.

ಇತ್ತೀಚಿನ ದಿನಗಳಲ್ಲಿ ಸ್ತ್ರೀಯರ ಮೇಲೆ ನಡೆಯುವ ದೌರ್ಜನ್ಯ, ಆತ್ಯಾಚಾರ, ಕೊಲೆ, ಮಾನಾವ ಸಾಗಾಟ ವ್ಯವಹಾರ ಹಾಗೂ ಹೆಣ್ಣನ್ನು ಭೋಗದ ವಸ್ತುವಿನಂತೆ ಕಾಣುವ ಮನುಜರಿಗೆ ನಾವು ಆಚರಿಸುವ ಹಬ್ಬ ಆವರ ಕಣ್ಣು ತೆರೆದು ಹೆಣ್ಣಿನ ಸ್ಥಾನ ಮಾನ ಆರಿತು ಆವರನ್ನು ಗೌರವಿಸುವ ಹಾಗೆ ಪ್ರೆರಣೆ ನೀಡಲಿ. ಆಗ ನಾವು ಆಚರಿಸುವ ಹಬ್ಬಕ್ಕೊಂದು ಸಾರ್ಥಕತೆ ಬರುವುದು. ಇಂಥಹ ಸಾರ್ಥಕ ಜೀವನ ನಮ್ಮದಾಗಲಿ ಎಂದು ಆಶಿಸುತ್ತೇನೆ. ಜಗತ್ತಿನಾದ್ಯಂತ ಕಥೊಲಿಕ್ ಧರ್ಮ ಸಭೆಯಲ್ಲಿ  ಈ ವರುಷ ಆಮೊರಿಸ್ ಲೆತ್ತಿಶಿಯಾ ಕುಟುಂಬದ ವರುಷ ಎಂದು ಆಚರಿಸುವ ಸುಸಂದರ್ಬದಲ್ಲಿ ಈ ಹಬ್ಬವು ನಮ್ಮ ಕುಟುಂಬ ಸಂಬಂಧಗಳನ್ನು ಬಲೀಷ್ಠಗೋಲಿಸಲು, ಒಗ್ಗಟ್ಟಿನಿಂದ, ಆನ್ಯೋನ್ಯತೆಯಿಂದ ಬಾಳಲು, ಸಂತೊಷದ ಕೌಟುಂಬಿಕ ಜೀವನ ನಡೆಸಲು ಮಾತೆ ಮರಿಯಳು ನಮಗಾಗಿ ಪ್ರಾರ್ಥಿಸಲಿ ಎಂದು ಬೇಡುವ. ನಾಡಿನ ಸಮಸ್ತ ಜನರಿಗೆ ಮೋತಿ ಹಬ್ಬದ ಶುಭಾಶಯಗಳು. ದೆವರು ನಮ್ಮೆಲ್ಲರನ್ನು ಹರಸಲಿ


Spread the love