ಮಾನಸಿಕ ಖಿನ್ನತೆ, ತಾಯಿಯನ್ನು ಕಾಲೇಜಿಗೆ ಬಿಟ್ಟು ಬಂದು ಜೀವಾಂತ್ಯಗೊಳಿಸಿದ ಕಡಬದ ಯುವಕ!
ಕಡಬ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನೋರ್ವ ಜೀವಾಂತ್ಯಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಸಂಭವಿಸಿದೆ.

ಇಲ್ಲಿನ ನೂಜಿಬಾಳ್ತಿಲ ಗ್ರಾಮದ ಕೊಡಂಕೇರಿ ಆಕೋಟತ್ತಡ್ಕದ ದಿ.ವಾಲ್ಟರ್ ರೋಡ್ರಿಗಸ್ ಎಂಬವರ ಪುತ್ರ ಚೇತನ್ ಜೀವಾಂತ್ಯಗೊಳಿಸಿದ ಯುವಕನಾಗಿದ್ದಾನೆ. ತನ್ನ ಮನೆಯಲ್ಲೇ ರೂಮಿಗೆ ಅಳವಡಿಸಿದ ಫ್ಯಾನಿಗೆ ನೇಣು ಬಿಗಿದುಕೊಂಡು ಚೇತನ್ ಅವರು ಜೀವಾಂತ್ಯ ಮಾಡಿಕೊಂಡಿದ್ದಾರೆ .
ಪದವಿ ಮುಗಿಸಿ ಮನೆಯಲ್ಲಿ ಕೃಷಿ ಕೆಲಸ ಮಾಡಿ ಕೊಂಡಿದ್ದ ಚೇತನ್ ಕಳೆದ ಕೆಲ ಸಮಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಈ ಬಗ್ಗೆ ಪುತ್ತೂರು ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಬುಧವಾರ ಶಿಕ್ಷಕಿಯಾಗಿರುವ ತಾಯಿಯನ್ನು ಕಾಲೇಜಿನವರೆಗೆ ಬಿಟ್ಟು ಬಂದಿದ್ದ ಚೇತನ್ ಬಳಿಕ ಮನೆಗೆ ಬಂದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ತಾಯಿ ಎಂದಿನಂತೆ ಮಧ್ಯಾಹ್ನ ದೂರವಾಣಿ ಕರೆ ಮಾಡಿದಾಗ ಕರೆ ಸ್ವೀಕರಿಸದೆ ಇದ್ದಾಗ ಮನೆಯ ಮೇಲೆ ಕೆಲಸ ಮಾಡುತ್ತಿದ್ದ ಕೆಲಸದವರಿಗೆ ಕರೆ ಮಾಡಿ ಮಗ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ಸ್ವಲ್ಪ ವಿಚಾರಿಸಿ ಎಂದಿದ್ದರು.
ಕೆಲಸಗಾರ ಮನೆಯ ರೂಮಿಗೆ ಬಂದಾಗ ಒಳಗಿನಿಂದ ಚಿಲಕ ಹಾಕಿಕೊಂಡು ಭದ್ರಗೊಳಿಸಿರುವುದಾಗಿ ಬಳಿಕ ಕಿಟಕಿ ಸಂದಿಯಿಂದ ರೂಮಿನ ಒಳಗಡೆ ನೋಡಿದಾಗ ಚೇತನ್ ರೂಮಿಗೆ ಅಳವಡಿಸಿದ ಫ್ಯಾನಿಗೆ ನೇಣು ಬಿಗಿದುಕೊಂಡು ನೇತಾಡುವ ಸ್ಥಿತಿಯಲ್ಲಿರುವುದು ಕಂಡಿದೆ. ತಾಯಿ ಅವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ