ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ : ನಾಲ್ವರ ಬಂಧನ

Spread the love

ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ : ನಾಲ್ವರ ಬಂಧನ

ಮಂಗಳೂರು: ನಗರದ ಹೊರವಲಯದ ಬಂಗ್ರಕುಳೂರು ಎಂಬಲ್ಲಿ ತಲವಾರು ತೋರಿಸಿ ಜಾನುವಾರು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧೀಸಿದ್ದಾರೆ.

ಬಂಧಿತರನ್ನು ಉಳ್ಳಾಲದ ಸಲೀಂ (32), ತಂಝೀಲ್‌ (25), ಇಕ್ಬಾಲ್ (23) ಮತ್ತು ಅಫ್ರಿದಿ ಎಂದು ಗುರುತಿಸಲಾಗಿದೆ.

ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಡಿಸಿಪಿ ಗಳಾದ ಹರಿರಾಮ್ ಶಂಕರ್, ದಿನೇಶ್ ಕುಮಾರ್ ಮಾರ್ಗದರ್ಶನ, ಎಸಿಪಿ ಮಹೇಶ್ ಕುಮಾರ್ ಸಲಹೆಯಲ್ಲಿ ಮೂಡಬಿದಿರೆ ಮತ್ತು ಬಜ್ಪೆ ಠಾಣಾ ಸಿಬ್ಬಂದಿಗಳ ಸಹಕಾರದೊಂದಿಗೆ ನಡೆಸಲಾಗಿದೆ.

ಕದ್ದ 2 ದನಗಳು ಉಮೇಶ್ ಮಲರಾಯಸಾನ ಮತ್ತು 1 ದನ ಉದಯ ಶೆಟ್ಟಿ ಇವರದ್ದಾಗಿದ್ದವು.


Spread the love