ಮಾರ್ಚ್ 3 ರಿಂದ 5 ರವರಗೆ ಕಾರ್ಕಳ ಬಂಗ್ಲೆಗುಡ್ಡೆ ಸ್ವಲಾತ್ ವಾರ್ಷಿಕ ಸಮ್ಮೇಳನ

Spread the love

ಮಾರ್ಚ್ 3 ರಿಂದ 5 ರವರಗೆ ಕಾರ್ಕಳ ಬಂಗ್ಲೆಗುಡ್ಡೆ ಸ್ವಲಾತ್ ವಾರ್ಷಿಕ ಸಮ್ಮೇಳನ

ಕಾರ್ಕಳ: ಹಯಾತುಲ್ ಇಸ್ಲಾಂ ಎಸೋಸಿಯೇಶನ್ ಬಂಗ್ಲೆಗುಡ್ಡೆ ಹಾಗೂ ತ್ವೈಭಾ ಗಾರ್ಡನ್ ಬಂಗ್ಲೆಗುಡ್ಡೆ ಆಶ್ರಯದಲ್ಲಿ ನಡೆಯುವ ಬ್ರಹತ್ ಸ್ವಲಾತ್ ಸಮ್ಮೇಳನವು ಮಾ.3 ರಿಂದ 5 ರವರಗೆ ಬಂಗ್ಲೆಗುಡ್ಡೆ ಸಲ್ಮಾನ್ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿರುವುದು. ಬ್ರಹತ್ ಸ್ವಲಾತ್ ಸಮ್ಮೇಳನದ ಅಂಗವಾಗಿ ಮಾ 5 ರಂದು ಮದನೀಯಂ ಕಾರ್ಯಕ್ರಮವು ಜರುಗಲಿದೆ ಎಂದು ತ್ವೈಬಾ ಗಾರ್ಡನ್ ಪ್ರಾಂಶುಪಾಲ ಅಹ್ಮದ್ ಶರೀಫ್ ಸಾಅದಿ ಅಲ್ ಖಾಮೀಲ್ ರವರು ತಿಳಿಸಿದ್ದಾರೆ

ಮಾರ್ಚ್ 3 ಶುಕ್ರವಾರ ಮಗ್ರಿಬ್ ನಮಾಜ್ ನಂತರ ಅಸ್ಸಯ್ಯಿದ್ ಹಸನ್ ಅಬ್ದುಲ್ಲಾಹಿ ಅಸ್ಸಖಾಫ್ ಇಂಬಿಚ್ಚಿಕೋಯ ತಂಙಳ್ ಅದೂರುರವರ ದುಶಃ ಆಶಿರ್ವಚನದೊಂದಿಗೆ ತ್ವೈಭಾ ಗಾರ್ಡನ್ ಬಂಗ್ಲೆಗುಡ್ಡೆ ಇದರ ಪ್ರಾಂಶುಪಾಲರಾದ ಅಹ್ಮದ್‌ ಶರೀಫ್‌ ಸಅದಿ ಅಲ್‌ ಕಾಮಿಲಿ ಕಿಲ್ಲೂರು ಉದ್ಘಾಟನೆ ಮಾಡಲಿರುವರು.

ಮುಖ್ಯ ಪ್ರಭಾಷಣಕಾರರಾಗಿ KGN ದಅವಾ ಕಾಲೇಜು ಮಿತ್ತೂರು ಇದರ ಸದರ್ ಮುಹಲ್ಲಿಮ್ ಹುಸೈನ್ ಮುಈನಿ ಅಲ್ ಅಹ್ಸನಿ ಮಾರ್ನಾಡ್ ರವರು ಭಾಗವಹಿಸಲಿದ್ದಾರೆ

ಮಾರ್ಚ್ 4 ಶನಿವಾರ ಖಾಜಾ ಮುಈನುದ್ದೀನ್ ಜಿಸ್ತಿ ಅಜ್ಮೀರ್ (ರ)ರವರ ಪೌತ್ರ ಸಯ್ಯಿದ್ ನಿಝಾಮುದ್ದೀನ್ ಫೀರ್ ಝಾದೆ ಹುಬ್ಬಳ್ಳಿ ದುಆಃ ಆಶಿರ್ವಚನ ನೀಡಲಿದ್ದು ಉದ್ಘಾಟನೆಯನ್ನು ಡಾII ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ ನೆರವೇರಿಸಲಿದ್ದುಮುಖ್ಯ ಪ್ರಭಾಷಣಕಾರರಾಗಿ ಕಾರ್ವಾರದ ಖಾಝಿ ಹಝ್ರತ ಮೌಲಾನಾ ಮುಫ್ತಿ ಇಷ್ ತಿಹಾಖ್ ಸಾಹೇಬ್ ಭಾಗವಹಿಸಲಿದ್ದಾರೆ

ಮಾರ್ಚ್ 05 ಭಾನುವಾರ ಸ್ವಲಾತ್‌ ವಾರ್ಷಿಕ ಹಾಗೂ ಮದನೀಯಂ ಮಜ್ಲಿಸ್ ನಡೆಯಲಿದ್ದು ಅಧ್ಯಕ್ಷತೆಯನ್ನು ಅಸ್ಸಯ್ಯಿದ್ ಸಾದಾತ್ ತಂಙಳ್ ಬಾ ಅಲವಿ ಗುರುವಾಯನಕೆರೆ ವಹಿಸಲಿದ್ದು ಉದ್ಘಾಟನೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬೂ ಸುಫ್ಯಾನ್ ಎಚ್.ಐ ಇಬ್ರಾಹೀಂ ಮದನಿ ನೆರವೇರಿಸಲಿರುವರು

ಹಿಫ್ಳುಲ್ ಕುರ್‌ಆನ್‌ ಕಾಲೇಜು ಲೋಗೋ ಬಿಡುಗಡೆಯನ್ನು ಮಂಗಳೂರಿನ ಉದ್ಯಮಿ ಶಾಕಿರ್ ಹಾಜಿ ಹೈಸಂ ಮಂಗಳೂರು ರವರು ಮಾಡಲಿರುವರು ಮುಖ್ಯ ಪ್ರಭಾಷಣ ಹಾಗೂ ಮದನೀಯಂ ಮಜ್ಜಿಸ್ ನ್ನು ಮದನೀಯಂ ಉಸ್ತಾದ್ ಎಂದೇ ಖ್ಯಾತರಾದ ಅಬ್ದುಲ್‌ ಲತೀಫ್‌ ಸಖಾಫಿ ಕಾಂತಪುರಂ ರವರು ನಡೆಸಿಕೊಡಲಿದ್ದು,

ಮುಖ್ಯ ಅಥಿತಿಗಳಾಗಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಿತಿ ಸಂಚಾಲಕ ಮುಹಮ್ಮದ್ ಶರೀಫ್ , ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾರ್ಕಳದ ಕಾರ್ಕಳ ತಾಲೂಕು ಅಧ್ಯಕ್ಷ ಮುಹಮ್ಮದ್ ಗೌಸ್‌ ಮಿಯಾರು, ಕರ್ನಾಕಟ ಮುಸ್ಲಿಂ ಜಮಾಅತ್ ನ ತಾಲೂಕುಅಧ್ಯಕ್ಷ ನಾಸಿರ್ ಶೇಕ್ ಇಂಜಿನಿಯರ್ ಕಾರ್ಕಳ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಶ್ಫಾಕ್ ಅಹ್ಮದ್, ಕಾಬೆಟ್ಟು ಉದ್ಯಮಿ ಅಬೂಬಕ್ಕರ್ ಸಿದ್ದೀಕ್, ಎಸ್ ವೈ ಎಸ್ ಮೂಡುಬಿದ್ರೆ ಸೆಂಟರ್ ಅಧ್ಯಕ್ಷ ಅಬ್ದುಸ್ಸಲಾಂ ಮದನಿ ಗುಂಡುಕಲ್ಲು ಎಸ್.ಎಂ.ಎ ಕಾರ್ಕಳ ವಲಯಾಧ್ಯಕ್ಷ ಎಚ್ ಸುಲೈಮಾನ್ ಬಜಗೋಳಿ ಬದ್ರಿಯ ಜುಮಾ ಮಸೀದಿ ಎಣ್ಣೆಹೊಳೆ ಅಧ್ಯಕ ಪಿ.ಜೆ. ರಹೀಂ ಮುಹಮ್ಮದ್ ಜಲ್ವಾ ಎ ನೂರ್ನ ಮೌಲಾನ ಸಹೀದ್ ಅಹ್ಮದ್ ರಝಾ ,ಮೌಲಾನ ಮುಫ್ತಿ ಗಲಾಂ ರಝಾ ಬರ್ಕಾತಿ, ನಮ್ಮ ನಾಡ ಒಕ್ಕೂಟದ ಕಾರ್ಕಳ ಅಧ್ಯಕ್ಷ ಶಾಕೀರ್ ಹುಸೇನ್, ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಅಬ್ದುಲ್ ಖಾಲಿಕ್, ಉದ್ಯಮಿಗಳಾದ ಹೈದರ್ ಎಣ್ಣೆಹೊಳೆ, ಸಮದ್ ಖಾನ್ ಮುರತಂಗಡಿ, ಕೆ ಸಿ ಎಫ್ ಇಹ್ಸಾನ್ ವಿಭಾಗದ ಮುಖ್ಯಸ್ಥ ಇಕ್ಭಾಲ್ ಕಾಜೂರು , ಮೌಲಾನ ಅಬ್ದುಲ್ರಾಝಿಕ್ ರಿಝ್ವಿ ಮೌಲಾನ ಜಂಶೀರ್ ಅಹ್ಮದ್ ಮಿಸ್ಬಾಹಿ ಮೌಲಾನ ಆದಿಲ್ ರಝಾ ಮೌಲಾನ ಶಾದಿಲ್ ರಝಾ ಮೌಲಾನ ಅಶ್ಪಾಕ್ ಸಖಾಫಿ,ಎಸ್ ಜೆ ಎಂ ಕಾರ್ಕಳ ಅಧ್ಯಕ್ಷ ಉಮರ್ ಸ ಅದಿ ಅಲ್ ಅಪ್ಳಲಿ ಹಾಗೂ ಉಡುಪಿ ಹಾಗೂ ದ .ಕ ಜಿಲ್ಲೆಯ ಪ್ರಮುಖ ಸುನ್ನಿ ವಿದ್ವಾಂಸರು, ಉಲೇಮಾ ಉಮರಾಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love

Leave a Reply

Please enter your comment!
Please enter your name here