
‘ಮಾಲ್ಶಿ ಸ್ಟ್ರೈಕರ್ಸ್’ ತಂಡಕ್ಕೆ ತುಳುನಾಡು ಪ್ರೀಮಿಯರ್ ಲೀಗ್ ಶಟಲ್ ಬ್ಯಾಡ್ಮಿಂಟನ್ ಸೀಸನ್ 2 ಪ್ರಶಸ್ತಿ
ಉಡುಪಿ: ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ನಡೆದ ತುಳುನಾಡು ಪ್ರೀಮಿಯರ್ ಲೀಗ್ ಶಟಲ್ ಬ್ಯಾಡ್ಮಿಂಟನ್ ಸೀಸನ್ 2 ಪಂದ್ಯಾವಳಿಯಲ್ಲಿ ಚಂದ್ರಕಾಂತ್ ಶೆಣೈ ಮತ್ತು ಮಹೇಶ್ ಪ್ರಭು ಮಂಗಳೂರು ಇವರ ಮಾಲ್ಶಿ ಸ್ಟ್ರೈಕರ್ಸ್ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಟೆರೆನ್ಸ್ ಸುವಾರಿಸ್ ನೇತೃತ್ವದ ಎರೋರ್ಸ್ 155 ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಡೆದುಕೊಂಡಿತು.
ಪಂದ್ಯಾವಳಿಯಲ್ಲಿ ನ್ಯಾಷನಲ್ ಸ್ಮಾಶರ್ಸ್, ಎರೋಕ್ಸ್ 155, ಬ್ಯಾರೀಸ್ ಸ್ಪೋರ್ಟ್ಸ್ ಪ್ರಮೋಟರ್ಸ್, ಗ್ಯಾಲಕ್ಸಿ ಸ್ಪೋರ್ಟ್ಸ್, ಮಾಲ್ಶಿ ಸ್ಟ್ರೈಕರ್ಸ್, ಬಿಗ್ ಬೀಟರ್ಸ್ ಅಂಬಲಪಾಡಿ, ಮತ್ಸ್ಯರಾಜ್ ಗ್ರೂಪ್ ಮಲ್ಪೆ, ಡೇರಿಂಗ್ ಜಾಗ್ವರ್ಸ್ ಸೇರಿದಂತೆ 8 ತಂಡಗಳು ಭಾಗವಹಿಸಿದ್ದವು.
ಕ್ರೀಡಾಕೂಟದಲ್ಲಿ 20 ವರ್ಷಗಳಿಗಿಂತ ಕಿರಿಯ ಹುಡುಗರ ಡಬಲ್ಸ್, ಪುರಷರ ಒಪನ್ ಡಬಲ್ಸ್, ಮಿಕ್ಸ್ ಡ್ ಡಬಲ್ಸ್, 30 ವರ್ಷ ಮೇಲ್ಪಟ್ಟ ಪುರುಷರ, 40 ವರ್ಷ ಮೇಲ್ಪಟ್ಟ ಪುರುಷರ, 45 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ ಹಾಗೂ 30 ವರ್ಷ ಮೇಲ್ಪಟ್ಟ ಮಹಿಳೆರ ಡಬಲ್ಸ್ ಪಂದ್ಯಾಟಗಳು ನಡೆದವು.