ಮಾ.2: ಇಂಧನ ದರ ಏರಿಕೆ ವಿರೋಧಿಸಿ ದಕ ಕಾಂಗ್ರೆಸ್ ನಿಂದ ಹಕ್ಕೊತ್ತಾಯ ಜಾಥಾ

Spread the love

ಮಾ.2: ಇಂಧನ ದರ ಏರಿಕೆ ವಿರೋಧಿಸಿ ದಕ ಕಾಂಗ್ರೆಸ್ ನಿಂದ ಹಕ್ಕೊತ್ತಾಯ ಜಾಥಾ

ಮಂಗಳೂರು: ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಸಿಕ ಸಭೆ ಬುಧವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ಹರೀಶ್ ಕುಮಾರ್, ಇಂಧನ ದರ ಏರಿಕೆ ಖಂಡಿಸಿ ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಮಾ.2ರಂದು ನಗರದ ಬಾವುಟಗುಡ್ಡೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ‘ಹಕ್ಕೋತ್ತಾಯ ಜಾಥ’ ನಡೆಸಿ ಬಳಿಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಗುವುದು. ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಸದಾಶಿವ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಮುರಳಿಧರ್ ರೈ, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರುಗಳಾದ ವಿಶ್ವಾಸ್ ಕುಮಾರ್ ದಾಸ್, ಸುರೇಶ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಲಾರೆನ್ಸ್ ಡಿಸೋಜಾ, ಅಲಿಸ್ಟರ್ ಡಿಕುನ್ನಾ, ಶುಭೋದಯ ಆಳ್ವ, ಡಾ.ಶೇಖರ್ ಪೂಜಾರಿ, ಕೆಪಿಸಿಸಿ ಸದಸ್ಯರಾದ ವಸಂತ್ ಬರ್ನಾಡ್, ದ.ಕ.ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.


Spread the love