ಮಾ.25: ಉಡುಪಿ ಜಿಲ್ಲೆಯಲ್ಲಿ145 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆ!

Spread the love

 ಮಾ.25: ಉಡುಪಿ ಜಿಲ್ಲೆಯಲ್ಲಿ145 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆ!

ಉಡುಪಿ:  ಉಡುಪಿ ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 145 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಈ ಪೈಕಿ ಮಣಿಪಾಲದ ಎಂಐಟಿ ಕ್ಯಾಂಪಸ್ನಲ್ಲಿ 111 ಮಂದಿ ಪಾಸಿಟಿವ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಎಂಐಟಿ ಕ್ಯಾಂಪಸ್ನಲ್ಲಿ ಕಳೆದ ಒಂದು ವಾರಗಳಿಂದ ನಿರಂತರವಾಗಿ ಕೊರೋನಾ ಪೀಡಿತರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಂಟೈನ್ಮೆಂಟ್ ಜೋನ್ ಆಗಿರುವ ಈ ಕ್ಯಾಂಪಸ್ ನ ಬಹುತೇಕ ಎಲ್ಲರ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಬಹುತೇಕ ವರದಿಗಳು ಆರೋಗ್ಯ ಇಲಾಖೆಯ ಕೈಸೇರಿದ್ದು, 522 ಪ್ರಕರಣಗಳು ಈ ಕ್ಯಾಂಪಸ್ ಒಂದರಲ್ಲೇ ಕಂಡುಬಂದಿದೆ.

ಇವರಲ್ಲಿ ಎಲ್ಲರೂ ಬಹುತೇಕ ಅನ್ಯ ರಾಜ್ಯಗಳ ವಿದ್ಯಾರ್ಥಿಗಳಾಗಿದ್ದು ಇವರಲ್ಲಿ ಯಾವುದೇ ರೋಗ ಲಕ್ಷಣಗಳು ಇಲ್ಲ. ಹಾಗಾಗಿ ವಿದ್ಯಾರ್ಥಿಗಳನ್ನು ಹಾಸ್ಟೆಲ್ನಲ್ಲಿ ಇರಿಸಿಕೊಂಡು ಕಣ್ಗಾವಲು ವಹಿಸಲಾಗಿದೆ. ಮಣಿಪಾಲ ಕ್ಯಾಂಪಸನ್ನು ಹತೋಟಿಗೆ ಪಡೆಯುವುದು ಆರೋಗ್ಯ ಇಲಾಖೆಗೆ ಬಹುದೊಡ್ಡ ಸವಾಲಾಗಿದೆ


Spread the love