ಮಾ 27: ಮೀನು ಮಾರಾಟ ಫೆಡರೇಶನ್ ವತಿಯಿಂದ ಸಿಗ್ನಾ ಹೆಲ್ತ್ ಕಾರ್ಡ್ ಮತ್ತು ವಿದ್ಯಾರ್ಥಿ ವೇತನ ವಿತರಣೆ

Spread the love

ಮಾ 27: ಮೀನು ಮಾರಾಟ ಫೆಡರೇಶನ್ ವತಿಯಿಂದ ಸಿಗ್ನಾ ಹೆಲ್ತ್ ಕಾರ್ಡ್ ಮತ್ತು ವಿದ್ಯಾರ್ಥಿ ವೇತನ ವಿತರಣೆ

ಉಡುಪಿ: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮಂಗಳೂರು ವತಿಯಿಂದ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಮತ್ತು ಮಣಿಪಾಲ್ ಸಿಗ್ನಾ ಪ್ರೋಹೆಲ್ತ್ ಇನ್ಶ್ಯೂರೆನ್ಸ್ ಪಾಲಿಸಿ ಇವರ ಸಹೋಗದೊಂದಿಗೆ ಸದಸ್ಯರಿಗೆ ಉಚಿತ ಮಣಿಪಾಲ್ ಸಿಗ್ನಾ ಪ್ರೋಹೆಲ್ತ್ ಇನ್ಶ್ಯೂರೆನ್ಸ್ ಕಾರ್ಡ್ ಹಾಗೂ ಫೆಡರೇಷನ್ ವತಿಯಿಂದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಮಾರ್ಚ್ 27ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ಮಂಗಳೂರು ಮುಳಿಹಿತ್ಲುವಿನ ಫೆಡರೇಷನ್ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ.

ಸಮಾರಂಭದ ಉದ್ಘಾಟನೆಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕರಾದ ನಾಡೋಜ ಡಾ| ಜಿ. ಶಂಕರ್ ನೆರವೇರಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ವಹಿಸಲಿದ್ದಾರೆ.

ಸಮಾರಂಭದಲ್ಲಿ ಮಖ್ಯ ಅತಿಥಿಗಳಾಗಿ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಐ.ಒ.ಸಿ. ಚೀಫ್ ಡಿವಿಜನಲ್ ರಿಟೇಲ್ ಸೇಲ್ಸ್ ಮ್ಯಾನೇಜರ್ ಅನೂಪ್ ಕುಶ್ವಾ, ಕಾಂಚನ ಹ್ಯುಂಡೈನ ಆಡಳಿತ ನಿರ್ದೇಶಕರಾದ ಪ್ರಸಾದ್ರಾಜ್ ಕಾಂಚನ್, ಎಂ. ಎಸ್.ಇ. ಝಡ್ ಮಂಗಳೂರಿನ ಸೀನಿಯರ್ ಜನರಲ್ ಮ್ಯಾನೇಜರ್ ಶ್ರೀನಿವಾಸಲು ಭಾಗವಹಿಸಲಿದ್ದಾರೆ.

ಪ್ರಸ್ತುತ ಸಾಲಿನಲ್ಲಿ ಫೆಡರೇಷನ್ ವತಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 747 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರೂ. 10,11, 600 ಮೊತ್ತದ ವಿದ್ಯಾರ್ಥಿ ವೇತನ ಹಾಗೂ 1510 ಸದಸ್ಯ ಕುಟುಂಬಗಳಿಗೆ ರೂ. 22,65,000 ವೆಚ್ಚದಲ್ಲಿ ಉಚಿತ ಮಣಿಪಾಲ್ ಸಿಗ್ನಾ ಪ್ರೋಹೆಲ್ತ್ ಇನ್ಶ್ಯೂರೆನ್ಸ್ ಕಾರ್ಡ್ ವಿತರಿಸುವುದಾಗಿ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love