ಮಾ. 31: ಫಾರ್ಚುನ್‌ ಗ್ರೂಪ್‌ ಆಫ್‌ ಚಾರಿಟಿ ಘಟಕ ಆರಂಭ ಪ್ರಯುಕ್ತ ರಕ್ತದಾನ ಶಿಬಿರ

Spread the love

ಮಾ. 31: ಫಾರ್ಚುನ್‌ ಗ್ರೂಪ್‌ ಆಫ್‌ ಚಾರಿಟಿ ಘಟಕ ಆರಂಭ ಪ್ರಯುಕ್ತ ರಕ್ತದಾನ ಶಿಬಿರ

ಉಡುಪಿ: ಬಡವರ ಮತ್ತು ಅಶಕ್ತರಿಗೆ ನೆರವು ನೀಡುವ ಉದ್ದೇಶದಿಂದ ಸಮಾನ ಮನಸ್ಕ ಯುವಕರ ತಂಡವನ್ನು ಕಟ್ಟಿಕೊಂಡು ಫಾರ್ಚುನ್‌ ಗ್ರೂಪ್‌ ಆಫ್‌ ಚಾರಿಟಿ ಘಟಕದ ನೇತೃತ್ವದಲ್ಲಿ ಮಾರ್ಚ್‌ 31 ರಂದು ರಕ್ತದಾನ ಶಿಬಿರವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30 ರ ವರೆಗೆ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಮಣಿಪಾಲ ಠಾಣೆಯ ಪೊಲೀಸ್‌ ನಿರೀಕ್ಷಕರಾದ ಮಂಜುನಾಥ್‌ ಅವರು ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ರಘುಪತಿಭಟ್‌, ಮಾಜಿ ಸಚಿವರಾದ ಪ್ರಮೋದ್‌ ಮಧ್ವರಾಜ್‌, ವಿನಯ್‌ ಕುಮಾರ್‌ ಸೊರಕೆ, ಸಮಾಜ ಸೇವಕರಾದ ಕೆ ಕೃಷ್ಣಮೂರ್ತಿ ಆಚಾರ್ಯಾ, ದಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ ಇದರ ಅಧ್ಯಕ್ಷರಾದ ಯಶ್ಪಾಲ್‌ ಸುವರ್ಣ, ಸಾಮಾಜಿಕ ಕಾರ್ಯಕರ್ತ ಸುರೇಶ್‌ ಶೆಟ್ಟಿ ಗುರ್ಮೆ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ದೀಪಕ್‌ ಕೋಟ್ಯಾನ್‌, ಜೆಡಿಎಸ್‌ ನಾಯಕರಾದ ಮನ್ಸೂರ್‌ ನಾವುಂದ, ಕಾಪು ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಶ್‌ ಕುಲಾಲ್‌ ಪಕ್ಕಾಲು, ಕೆ ಎಮ್‌ ಸಿ ಮಣಿಪಾಲ ಇದರ ರಕ್ತನಿಧಿ ಮುಖ್ಯಸ್ಥರಾದ ಡಾ ಶಮಿ ಶಾಸ್ತ್ರಿ ಉಪಸ್ಥಿತರಿರುವರು.

ಫಾರ್ಚುನ್‌ ಗ್ರೂಪ್‌ ಆಫ್‌ ಚಾರಿಟಿ ಘಟಕದ ಮುಖ್ಯ ಉದ್ದೇಶ ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ನೆರವು ನೀಡುವುದು, ಬಡವರಿಗೆ ಪ್ರತಿ ತಿಂಗಳು ಪಡಿತರ ವಿತರಣೆ, ರಕ್ತದ ಅವಶ್ಯಕತೆ ಇದ್ದವರಿಗೆ ನಿರಂತರವಾಗಿ ದಾನಿಗಳಿಂದ ರಕ್ತ ಪೊರೈಕೆ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ನೆರವು, ಫುಟ್‌ ಪಾತ್‌ ನಲ್ಲಿ ವಾಸಿಸುವ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಹಾಗೂ ಇನ್ನಿತರ ಸಮಾಜ ಸೇವಾ ಚಟುವಟಿಕೆಗಳನ್ನು ಉಡುಪಿ ಜಿಲ್ಲೆಯಾದ್ಯಂತ ನೆರವೇರಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಘಟಕದ ಆರಂಭದ ಪ್ರಯುಕ್ತ ಸಂಜೆ ಅನಾಥಾಶ್ರಮಗಳಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಇದೊಂದು ಸಮಾನ ಮನಸ್ಕ ಯುವಕರ ತಂಡವಾಗಿದ್ದು ಎಲ್ಲಾ ಜಾತಿ ಧರ್ಮದ ಯುವಕರು ಒಂದಾಗಿ ಸೇರಿಕೊಂಡು ಸಮಾಜಪರ ಕಾರ್ಯಗಳಿಗೆ ಮುಂದಾಗಿದ್ದಾರೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ


Spread the love