
ಮೀನುಗಾರಿಕೆ ಅಭಿವೃದ್ಧಿಯಲ್ಲಿ ತಾಂತ್ರಿಕ ತರಬೇತಿ ಮುಖ್ಯ: ಚೇತನ್ ಬೇಂಗ್ರೆ
ಮಂಗಳೂರು: ಮೀನುಗಾರಿಕೆ ಚಟುವಟಿಕೆಗಳಲ್ಲಿ ತಾಂತ್ರಿಕ ತರಬೇತಿ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದ್ದು, ಜಿಲ್ಲೆಯ ಬೋಟ್ ಮಾಲೀಕರು ಮತ್ತು ಮೀನುಗಾರರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಟ್ರಾಲ್ ಬೋಟ್ ಅಸೋಸಿಯೇಷನ್ ನ ಅಧ್ಯಕ್ಷ ಚೇತನ್ ಬೆಂಗ್ರೆ ಅವರು ಕರೆ ನೀಡಿದರು.
ಅವರು ಇತ್ತೀಚೆಗೆ ನಗರದ ಮೀನುಗಾರಿಕೆ ಕಾಲೇಜಿನಲ್ಲಿ ಮೀನುಗಾರಿಕೆ ಕಾಲೇಜಿನ ತಾಂತ್ರಿಕ ಮತ್ತು ತಂತ್ರಜ್ಞಾನ ವಿಭಾಗ ಹಾಗೂ ಹೈದರಾಬಾದ್ ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 3 ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.
ಜಿಲ್ಲೆಯ ಮೀನುಗಾರರ ಹಿತಾಸಕ್ತಿಗನುಗುಣವಾಗಿ ನಗರದಲ್ಲಿರುವ ಮೀನುಗಾರಿಕಾ ಕಾಲೇಜು ಅತ್ಯುತ್ತಮ ಸಂಶೋಧನೆ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದೆ, ಇದನ್ನು ಮೀನುಗಾರರ ಸಮುದಾಯ ಮತ್ತು ದೋಣಿ ಮಾಲೀಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಪರ್ಸಿನ್ ಬೋಟ್ ಅಸೋಸಿಯೇಷನ್ ನ ಅಧ್ಯಕ್ಷರಾದ ಶಶಿಕುಮಾರ್ ಬೆಂಗ್ರೆ ಅವರು ಹೇಳಿದರು.
ಈ ಕಾಲೇಜಿಗೆ 54 ವರ್ಷವಾಗಿರುವದರಿಂದ ಸರ್ಕಾರ ಮೀನುಗಾರಿಕೆ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಪರಿಗಣಿಸಬೇಕು ಎಂದವರು ಅಭಿಪ್ರಾಯಪಟ್ಟರು.
ಭವಿಷ್ಯದ ಪೀಳಿಗೆಗೆ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂದು ಹೇಳಿದರು.
ತರಬೇತಿ ಸಂಯೋಜಕರಾದ ಡಾ.ಜಯಾ ನಾಯ್ಕ್, ಮುಖ್ಯ ಅತಿಥಿಯಾಗಿದ್ದ ರಾಜ್ ಕುಮಾರ್ ನಾಯ್ಕ್, ಪ್ರೋಪೆಸರ್ ಮತ್ತು ಮುಖ್ಯಸ್ಥರಾದ ಮತ್ತು ಪ್ರಭಾರ ಡೀನ್ ಡಾ. ಎಸ್. ವರದರಾಜು ಮಾತನಾಡಿದರು.
ಸಹ ಪ್ರಾಧ್ಯಾಪಕ ಶಶಿಧರ ಬಾದಾಮಿ ವಂದಿಸಿದರು. ಕುಮಾರಿ ಪ್ರಾಪ್ತಿ ತರಬೇತಿ ನಡೆಸಿಕೊಟ್ಟರು.