
ಮೀನುಗಾರ ವೃತ್ತಿಗೆ ಕಾಂಗ್ರೆಸ್ ಅವಮಾನ : ಶ್ರೀನಿಧಿ ಹೆಗ್ಡೆ
ಉಡುಪಿ: ಬೈಂದೂರಿನ ಚುನಾವಣಾ ಪ್ರಚಾರಕ್ಕೆ ಬಂದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕರಾವಳಿ ಭಾಗದ ಜೀವನಾಡಿ ಆಗಿರುವ ಮೀನುಗಾರಿಕೆಯನ್ನು ತಮ್ಮ ರಾಜಕೀಯ ತೆವಲಿಗೆ ಅಣಕಿಸುವ ಮೂಲಕ ಇಡೀ ಮೊಗವೀರ ಸಮಾಜ ಮತ್ತು ಮೀನುಗಾರ ವೃತ್ತಿಯಲ್ಲಿರುವ ಲಕ್ಷಾಂತರ ಜನತೆಗೆ, ಮತ್ತು ಕರಾವಳಿಗೆ ಅವಮಾನ ಮಾಡಿದ್ದಾರೆ ಎಂದು ಉಡುಪಿ ಜಿಲ್ಲಾ ಮಾದ್ಯಮ ಪ್ರಕೋಸ್ಟ ಸಂಚಾಲಕರಾಗಿರುವ ಶ್ರೀನಿಧಿ ಹೆಗ್ಡೆ ಹೇಳಿದ್ದಾರೆ
ರಾಹುಲ್ ಗಾಂಧಿ ಒಂದು ಸಮುದಾಯಕ್ಕೆ ಅವಮಾನ ಮಾಡಿ ತಮ್ಮ ಸಂಸದ ಸ್ಥಾನಕ್ಕೆ ಕುತ್ತು ತಂದುಕೊಂಡರು. ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಅಸಲಿ ಮುಖ ಬಿಚ್ಚಿಟ್ಟರು. ಈಗ ಡಿಕೆಶಿ ಕರಾವಳಿಯ ಸಾವಿರಾರು ಜನರ ವೃತ್ತಿ ಮತ್ತು ಹಿಂದುಳಿದ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತನಾಡುವ ಮೂಲಕ ಕಾಂಗ್ರೆಸ್ ಅಜೆಂಡಾ ಏನೆಂಬುದನ್ನು ಈ ಮೂಲಕ ಸ್ಪಷ್ಟಪಡಸಿದ್ದಾರೆ.
ಮೀನಿಗೆ ಗಾಳ ಹಾಕಿ ಮೀನು ಹಿಡಿಯುವುದು ವೃತ್ತಿಯೆ ಅನ್ನೋದು ನೆನಪಿರಲಿ. ಕೋಟಿ ಕೋಟಿ ಹಣ ಗಳಿಸುವ ನಿಮಗೆಲ್ಲ ಈ ಕಡಲ ಮಕ್ಕಳ ಬೆವರ ಹನಿಗಳ ಮಹತ್ವ ತಿಳಿಯದು. ಡಿಕೆ ಶಿವಕುಮಾರ್ ಅವರು ಕರಾವಳಿಯ ಜನತೆಯಲ್ಲಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಉಡುಪಿ ಜಿಲ್ಲಾ ಮಾದ್ಯಮ ಪ್ರಕೋಸ್ಟ ಸಂಚಾಲಕರಾಗಿರುವ ಶ್ರೀನಿಧಿ ಹೆಗ್ಡೆ ಅವರು ಆಗ್ರಹಿಸಿದ್ದಾರೆ.