ಮೀನುಗಾರ ಸಮುದಾಯಕ್ಕೆ ಕೆಪಿಸಿಸಿ ವತಿಯಿಂದ ಆಂಬುಲೆನ್ಸ್ ಹಸ್ತಾಂತರ

Spread the love

ಮೀನುಗಾರ ಸಮುದಾಯಕ್ಕೆ ಕೆಪಿಸಿಸಿ ವತಿಯಿಂದ ಆಂಬುಲೆನ್ಸ್ ಹಸ್ತಾಂತರ

ಉಡುಪಿ: ಕೆಪಿಸಿಸಿ ವತಿಯಿಂದ ಮಲ್ಪೆಯ ಮೀನುಗಾರ ಸಮುದಾಯಕ್ಕೆ ಶುಕ್ರವಾರ ಆಂಬುಲೆನ್ಸ್ ಹಸ್ತಾಂತರ ಮಾಡಲಾಯಿತು.

ಈ ಮೊದಲು ಡಿ.ಕೆ ಶಿವಕುಮಾರ್ ಮಲ್ಪೆಗೆ ಬಂದಾಗ ಮೀನುಗಾರ ಸಮುದಾಯದವರು ಮತ್ತು ನೀರಿನಲ್ಲಿ ಬಿದ್ದವರನ್ನು ರಕ್ಷಣೆ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಈಶ್ವರ್‌ ಮಲ್ಪೆ ಆಂಬುಲೆನ್ಸ್ ನ ಬೇಡಿಕೆ ಇಟ್ಟಿದ್ದರು.ಅದರಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಂಬುಲೆನ್ಸ್ ಕಳುಸಿಕೊಟ್ಟಿದ್ದು ಇವತ್ತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಭವನದ ಮುಂಭಾಗ ಆಂಬುಲೆನ್ಸ್ ನ ಕೀಯನ್ನು ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಪ್ರಮೋದ್ ಮಧ್ವರಾಜ್ ,ಮಲ್ಪೆ ಬಂದರಿನಲ್ಲಿ ಸಾವಿರಾರು ಬೋಟ್ ಗಳಿವೆ,ಸಾವಿರಾರು ಮೀನುಗಾರರಿದ್ದಾರೆ.ಅವಘಡಗಳಾದಾಗ ,ಯಾರಾದರೂ ನೀರಿಗೆ ಬಿದ್ದಾಗ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲೂ ವ್ಯವಸ್ಥೆಗಳಿರಲಿಲ್ಲ.ಇದನ್ನು ಮನಗಂಡು ಡಿ.ಕೆ ಶಿವಕುಮಾರ್ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಸದ್ಯ ತಾತ್ಕಾಲಿಕವಾಗಿ ಈ ಅಂಬುಲೆನ್ಸ್‌ ನೀಡಲಾಗಿದ್ದು ಮುಂದೆ ರಾಜ್ಯ ಸಭಾ ಸದಸ್ಯ ನಾಸೀರ್‌ ಹುಸೇನ್‌ ಅವರು ಅನುದಾನದಲ್ಲಿ ಹೊಸ ಅಂಬುಲೆನ್ಸ್‌ ಗೆ ಅನುದಾನ ಬಿಡುಗಡೆ ಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಗಣೇಶ ಚತುರ್ಥಿ ದಿನವೇ ಆಂಬುಲೆನ್ಸ್ ಹಸ್ತಾಂತರ ಮಾಡಿದ್ದೇವೆ.ಆಂಬುಲೆನ್ಸ್ ಉಪಯೋಗಿಸುವ ಪ್ರಸಂಗ ಬಾರದೇ ಇರಲಿ,ಅವಘಡಗಳು ಸಂಭವಿಸದಿರಲಿ ಎಂದು ಹಾರೈಸಿದರು.

ಈ ವೇಳೆ ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ, ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ನಗರಸಭೆಯ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಾಯಕರಾದ ಯತೀಶ್ ಕರ್ಕೇರಾ, ಸತೀಶ್‌ ಅಮೀನ್‌ ಪಡುಕೆರೆ, ಡಿಯೋನ್‌ ಡಿಸೋಜಾ, ಸಾಯಿರಾಜ್‌, ಗಣೇಶ್‌ ನೇರ್ಗಿ, ಕೇಶವ ಕೋಟ್ಯಾನ್‌ ಮತ್ತಿತರರು ಉಪಸ್ಥಿತರಿದ್ದರು.


Spread the love