ಮೀನು ಮಾರಾಟ ಫೆಡರೇಶನ್‌ ಗೆ 2021-22 ನೇ ಸಾಲಿನ ಇಂಡಿಯನ್ ಆಯಿಲ್ ಸೂಪರ್ ಸೆಲ್ಲರ್ ಪ್ರಶಸ್ತಿ

Spread the love

ಮೀನು ಮಾರಾಟ ಫೆಡರೇಶನ್‌ ಗೆ 2021-22 ನೇ ಸಾಲಿನ ಇಂಡಿಯನ್ ಆಯಿಲ್ ಸೂಪರ್ ಸೆಲ್ಲರ್ ಪ್ರಶಸ್ತಿ

ಉಡುಪಿ: ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿ. ಮಂಗಳೂರು ವಿಭಾಗದ ರಿಟೇಲ್ ಡೀಲರ್ ಗಳ ಸಮಾವೇಶದಲ್ಲಿ 2021-22 ಸಾಲಿನಲ್ಲಿ ಮಂಗಳೂರು ವಿಭಾಗದಲ್ಲಿ ಅತ್ಯಧಿಕ ಡೀಸೆಲ್ ಮಾರಾಟಕ್ಕಾಗಿ ಸೂಪರ್ ಸೆಲ್ಲರ್ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ಸ್ವೀಕರಿಸಿದರು.

ಕುಂದಾಪುರದ ಯುವ ಮೆರಿಡಿಯನ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಇಂಡಿಯನ್ ಆಯಿಲ್ ಕಂಪೆನಿಯ ಕರ್ನಾಟಕ ವಿಭಾಗದ ಪ್ರಬಂಧಕರದ ಡಿ ಎಲ್ ಪ್ರಮೋದ್ ಪ್ರಶಸ್ತಿಯನ್ನು ವಿತರಿಸಿದರು.

2021-22 ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಸುಮಾರು 126 ಕೋಟಿ ರೂಪಾಯಿ ಮೌಲ್ಯದ 16,868 ಕಿಲೋ ಲೀಟರ್ ಅತ್ಯಧಿಕ ಡೀಸೆಲ್ ಮಾರಾಟ ಮಾಡುವ ಮೂಲಕ ಈ ಪ್ರಶಸ್ತಿಗೆ ಆಯ್ಕೆಯಾಗಿದೆ.


Spread the love