ಮೀನು ಮುಟ್ಟಿದ್ದರಿಂದ ದೇವಸ್ಥಾನದ ಒಳಗೆ ಹೋಗಲು ನಿರಾಕರಿಸಿದ ರಾಹುಲ್ ಗಾಂಧಿ!

Spread the love

ಮೀನು ಮುಟ್ಟಿದ್ದರಿಂದ ದೇವಸ್ಥಾನದ ಒಳಗೆ ಹೋಗಲು ನಿರಾಕರಿಸಿದ ರಾಹುಲ್ ಗಾಂಧಿ!

ಉಡುಪಿ: ಮೀನುಗಾರರೊಂದಿಗೆ ಸಂವಾದಕ್ಕಾಗಿ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ ಭೇಟಿಯ ವೇಳೆ ನಾನು ಕೈಯಲ್ಲಿ ಮೀನು ಮುಟ್ಟಿದ್ದೇನೆ ಆದ್ದರಿಂದ ದೇವಸ್ಥಾನದ ಒಳಗೆ ಬರಬಹುದೇ ಎಂದು ಪ್ರಶ್ನಿಸಿದ ಘಟನೆ ಗುರುವಾರ ನಡೆಯಿತು.

ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ಸಂವಾದದ ವೇಳೆ ರಾಹುಲ್ ಗಾಂಧಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ದೊಡ್ಡ ಗಾತ್ರದ ಅಂಜಲ್ ಮೀನೊಂದನ್ನು ಗಿಫ್ಟ್ ಆಗಿ ಕೊಟ್ಟಿತ್ತು. ಈ ಮೀನನ್ನು ಎತ್ತಿ ಖುಷಿ ಪಟ್ಟ ರಾಹುಲ್ ಮೀನುಗಾರ ಮಹಿಳೆಯ ಜೊತೆ ಆತ್ಮೀಯವಾಗಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದರು.

ಇದಾದ ಬಳಿಕ ನೇರ ಮಹಾಲಕ್ಷ್ಮಿ ದೇಗುಲಕ್ಕೆ ರಾಹುಲ್ ಗಾಂಧಿ ಬಂದಿದ್ದಾರೆ. ಈ ವೇಳೆ ಮೀನನ್ನು ಕೈಯಲ್ಲಿ ಹಿಡಿದಿದ್ದ ರಾಹುಲ್ ನಾನಿನ್ನು ಕೈ ತೊಳೆದಿಲ್ಲ ಎಂದು ನೀರಿಗಾಗಿ ಹುಡುಕಾಡಿದರು. ದೇವಸ್ಥಾನದ ಒಳಗೆ ಬರಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಸುತ್ತಮುತ್ತ ಇದ್ದ ಕಾಂಗ್ರೆಸ್ ನಾಯಕರು ಮೊಗವೀರ ಮುಖಂಡರು ಯಾವುದೇ ಅಭ್ಯಂತರ ಇಲ್ಲ ತಾವು ಒಳಗೆ ಬನ್ನಿ ಎಂದಿದ್ದಾರೆ. ನಂತರ ಜೊತೆಗಿದ್ದವರು ದೇಗುಲದ ಒಳಗೆ ಕರೆದುಕೊಂಡು ಹೋಗಿದ್ದಾರೆ. ಗರ್ಭಗುಡಿಯ ಪಕ್ಕ ತೆರಳದೇ, ಪ್ರಾಂಗಣದಲ್ಲೇ ನಿಂತು ವಿಶೇಷ ಪೂಜೆ ಸಲ್ಲಿಕೆ ಮಾಡಿದ ಅವರು, ಪ್ರಸಾದ ಸ್ವೀಕಾರ ಮಾಡಿದರು.


Spread the love