
ಮುಂದಿನ 5 ದಿನ ‘ಲಾಕ್ ಡೌನ್’ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ವಸ್ತುಗಳ ಖರೀದಿಗೆ ಅವಕಾಶವಿಲ್ಲ – ಡಿಸಿ ಜಿ.ಜಗದೀಶ್
ಉಡುಪಿ: ನಾಳೆಯಿಂದ ಐದು ದಿನಗಳ ಕಾಲ ಉಡುಪಿ ಜಿಲ್ಲೆಯ 35 ಗ್ರಾಮ ಪಂಚಾಯತ್ ಗಳು ಸಂಪೂರ್ಣ ಸೀಲ್ ಡೌನ್ ಆಗಲಿವೆ ಎಂದು ಉಡುಪಿ ಡಿಸಿ ಜಿ.ಜಗದೀಶ್ ಹೇಳಿದ್ದಾರೆ.
ಮುಂದಿನ ಐದು ದಿನಗಳ ಕಾಲ ಅಗತ್ಯ ವಸ್ತು ಖರೀದಿಗೂ ಕೂಡ ಅವಕಾಶ ಇರುವುದಿಲ್ಲ. ಕೇವಲ ಹಾಲು, ಮೆಡಿಕಲ್ ಶಾಪ್ ಮತ್ತು ಆಸ್ಪತ್ರೆಗಳಿಗೆ ಮಾತ್ರ ಅವಕಾಶ ಇದ್ದು ಅಗತ್ಯ ವಸ್ತುಗಳಿಗೂ ಗ್ರಾಮಸ್ಥರು ಮನೆಯಿಂದ ಹೊರಗಡೆ ಹೋಗುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ನಿನ್ನ ಈ ಸಂಬಂಧ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಜನಪ್ರತಿನಿಧಿಗಳ ಜೊತೆ ಸೇರಿ ಈ ನಿರ್ಣಯ ಕೈಗೊಂಡಿದ್ದೇವೆ. ಐವತ್ತಕ್ಕೂ ಹೆಚ್ಚು ಪಾಸಿಟಿವ್ ಇರುವ ಗ್ರಾಮಪಂಚಾಯಿತ್ ಗಳಲ್ಲಿ ನೋಡಿಕೊಳ್ಳಲು ಅಗತ್ಯ ಕಾರ್ಯ ಪಡೆಗಳನ್ನು ರಚಿಸಿದ್ದೇವೆ. ಗ್ರಾಮಸ್ಥರು ಇದಕ್ಕೆ ಸಹಕರಿಸಬೇಕು. ಜಿಲ್ಲೆ ಪಾಸಿಟಿವಿಟಿ ರೇಟ್ ಕಡಿಮೆ ಆಗಲೇಬೇಕು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.
ವಿನಾಯಿತಿಗಳು:
1) ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್ಸ್, ಕ್ಲಿನಿಕಲ್ ಲ್ಯಾಬ್, ಟೆಲಿಮೆಡಿಸಿನ್ ಸೌಲಭ್ಯಗಳು, ಔಷಧಾಲಯಗಳು, ಜನ ಔಷಧಿ ಕೇಂದ್ರಗಳು, ರಕ್ತ ಸಂಗ್ರಹ ಕೇಂದ್ರಗಳು,
2) Karnataka Milk Federation (KMF) ಹಾಲಿನ ಬೂತು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ
3) ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಸೀಮಿತ ಅವಧಿಗೆ ಹಾಲಿನ ಸಂಗ್ರಹಕ್ಕೆ ಅವಕಾಶ ಕಲ್ಪಿಸಲಾಗಿದೆ.
4) ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪೆಟ್ರೋಲ್ ಬಂಕ್ ಗಳು ಕಾರ್ಯಚರಿಸಲು ಅನುಮತಿಸಿದೆ.
5) ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳು
6) ಅಗತ್ಯ ತುರ್ತು ವೈದ್ಯಕೀಯ ಸೇವೆಯ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಇರುತ್ತದೆ.
7) ಈಗಾಗಲೇ ವಿವಾಹ ಸಮಾರಂಭಕ್ಕೆ ನೀಡಿರುವ ಅನುಮತಿಯಂತೆ, ವಿವಾಹ ಸಮಾರಂಭಗಳನ್ನು ನಡೆಸಲು ಅವಕಾಶವಿರುತ್ತದೆ.
ದಿನಾಂಕ: 02.06.2021 ರ ಬೆಳಗ್ಗೆ 6.00 ರಿಂದ ದಿನಾಂಕ: 07.06.2021 ರ ಬೆಳಗ್ಗೆ 6.00 ಗಂಟೆಯವರೆಗೆ ಮೇಲ್ಕಂಡ ಆದೇಶ ಜಾರಿಯಲ್ಲಿರುತ್ತವೆ. ಉಳಿದಂತೆ ಉಲ್ಲೇಖ (1) ರ ಸರ್ಕಾರದ ಆದೇಶ ಮತ್ತು ಸೇರ್ಪಡೆ ಆದೇಶಗಳಲ್ಲಿನ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಮೇಲಿನ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ, Disaster Management Act 2005, Karnataka Epidemic Diseases act 2020 ಮತ್ತು IPC ಸೆಕ್ಷನ್ 188 ಪ್ರಕಾರ ನಿಯಮಾನುಸಾರ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.