ಮುಂಬೈ – ಮಂಗಳೂರು ಬಸ್ಸಿನಲ್ಲಿ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

Spread the love

ಮುಂಬೈ – ಮಂಗಳೂರು ಬಸ್ಸಿನಲ್ಲಿ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ಕುಂದಾಪುರ: ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯೋರ್ವರ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.

ಮಹಾರಾಷ್ಟ್ರ ನಿವಾಸಿ ಈಶ್ವರ್ ದಲಿಚಂದ್ ಪೊರ್ವಾಲ್ (48) ಎಂಬವರು 10 ವರ್ಷಗಳಿಂದ ಮುಂಬೈಯಲ್ಲಿ ಚಿನ್ನ ಖರೀದಿಸಿ ಮಂಗಳೂರು ಮತ್ತು ಹೈದರಾಬಾದ್ ಕಡೆಗಳಲ್ಲಿ ಸೇಲ್ಸ್ ಮಾಡುವ ವ್ಯವಹಾರ ಮಾಡಿಕೊಂಡಿರುತ್ತಾರೆ. ಈಶ್ವರ್ ದಲಿಚಂದ್ ಪೊರ್ವಾಲ್ ರವರು ಈ ಹಿಂದೆ ಮುಂಬೈನ ಜವೇರಿ ಬಜಾರ್ ಎಂಬಲ್ಲಿರುವ ಅರಿಹನ್ ಡೈಮಂಡ್ ಆರ್ಟ ಜ್ಯುವೆಲ್ಲರಿ ಹಾಗೂ ಇನ್ನಿತರ ಜ್ಯುವೆಲ್ಲರಿ ಅಂಗಡಿಗಳಿಂದ 466.960 ಗ್ರಾಂ ತೂಕದ ಒಟ್ಟು 18 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಖರೀದಿಸಿ, ಈಶ್ವರ್ ದಲಿಚಂದ್ ಪೊರ್ವಾಲ್ ರವರು ಸದ್ರಿ ಚಿನ್ನಾಭರಣಗಳನ್ನು ಸ್ಟೀಲ್ ಬಾಕ್ಸಿನಲ್ಲಿರಿಸಿ ಸೂಟ್ ಕೇಸ್ ನಲ್ಲಿ ಭದ್ರಪಡಿಸಿ ಇಟ್ಟುಕೊಂಡಿದ್ದು ಜೂನ್‌ 14 ರಂದು ಮಹಾರಾಷ್ಟ್ರದಿಂದ ಮಂಗಳೂರಿಗೆ ಕೆನರಾ ಪಿಂಟೋ ಬಸ್ ನ್ನು ಬುಕ್ ಮಾಡಿ ಜೂನ್‌ 15ರಂದು ಮಧ್ಯಾಹ್ನ 3:30 ಗಂಟೆಗೆ ಮೀರಾ ರೋಡಿನ ಶೀತಲ ನಗರದಿಂದ ಮಂಗಳೂರಿಗೆ ಚಿನ್ನಾಭರಣ ಇರುವ ಸೂಟ್ ಕೇಸ್ ನೊಂದಿಗೆ KA-70 1458 ನೇ ಕೆನರಾ ಪಿಂಟೋ ಬಸ್ ನ ಸೀಟ್ ನಂಬ್ರ 27 W ರಲ್ಲಿ ಕುಳಿತುಕೊಂಡು ಚಿನ್ನಾಭರಣ ಇರುವ ಸೂಟ್ ಕೇಸನ್ನು ಸೀಟಿನ ಅಡಿಭಾಗದಲ್ಲಿ ಇರಿಸಿ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು.

ಜೂನ್‌ 16ರಂದು ಬೆಳಿಗ್ಗೆ 7.15 ರ ಸುಮಾರಿಗೆ ಶಿರೂರು ಗ್ರಾಮದ ನಿರ್ಗದ್ದೆಯ ಶಿವ ಸಾಗರ ಹೊಟೇಲ್ ಎದುರು ಚಾಲಕನು ಬಸ್ಸನ್ನು ಉಪಹಾರಕ್ಕಾಗಿ ನಿಲ್ಲಿಸಿದ್ದು ಈಶ್ವರ್ ದಲಿಚಂದ್ ಪೊರ್ವಾಲ್ ರವರು ಹೊಟೇಲ್ ನಲ್ಲಿ ತಿಂಡಿ ತಿನ್ನುತ್ತಿದ್ದಾಗ ಬಸ್ ನ ಕ್ಲಿನರ್ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬಸ್ಸಿನ ಒಳಗೆ ಪ್ರವೇಶಿಸಿ ಬ್ಯಾಗನ್ನು ಪರಿಶೀಲಿಸಿ ಬಸ್ಸಿನಿಂದ ಇಳಿದು ಹೊಟೇಲಿನಿಂದ ಸುಮಾರು ದೂರದಲ್ಲಿ ನಿಲ್ಲಿಸಿದ KA-03 N J-5060 ನೇ ನಂಬ್ರದ ಬ್ರೀಜಾ ಬಿಳಿ ಬಣ್ಣದ ಕಾರಿನಲ್ಲಿ ಪರಾರಿಯಾಗಿರುವುದಾಗಿ ಪ್ರಯಾಣಿಕರಲ್ಲಿ ತಿಳಿಸಿದಾಗ ಈಶ್ವರ್ ದಲಿಚಂದ್ ಪೊರ್ವಾಲ್ ರವರು ಕೂಡಲೇ ಬಸ್ಸಿನ ಒಳಗೆ ಹೋಗಿ ತಾನು ಕುಳಿತಿದ್ದ ಸೀಟಿನ ಅಡಿಯಲ್ಲಿ ಪರಿಶೀಲಿಸಿದಾಗ ಬ್ಯಾಗ್ ಇಲ್ಲದೇ ಇದ್ದು ಬಸ್ಸಿನ ಹಿಂಭಾಗಕ್ಕೆ ಹೋಗಿ ನೋಡಿದಾಗ ಸೂಟ್ ಕೇಸ್ ಬೀಗ ಒಡೆದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು ಅದರೊಳಗಿದ್ದ ಸ್ಟೀಲ್ ಬಾಕ್ಸ್ ತೆರೆದಿದ್ದು ಬಾಕ್ಸ್ ನೊಳಗಿದ್ದ ಹಲವು ಬಗೆಯ ಡಿಸೈನ್ ಗಳುಳ್ಳ ಮೂಗಿಗೆ ಮತ್ತು ಕಿವಿಗೆ ಹಾಕುವ 466.960 ಗ್ರಾಂ ತೂಕದ ಒಟ್ಟು 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love