ಮುಕ್ಕಾಲು ಅಡಿ ನೀರಿನಲ್ಲಿ ಶಾಸಕರ ತೆಪ್ಪ ಸವಾರಿ

Spread the love

ಮುಕ್ಕಾಲು ಅಡಿ ನೀರಿನಲ್ಲಿ ಶಾಸಕರ ತೆಪ್ಪ ಸವಾರಿ

ಚಾಮರಾಜನಗರ: ಮಳೆ ಹಾನಿ ಪ್ರದೇಶಕ್ಕೆ ಮುಕ್ಕಾಲು ಅಡಿ ನೀರಿನಲ್ಲಿ ತೆಪ್ಪದ ಮೂಲಕ ತೆರಳಿ ಜನರ ಅಕ್ರೋಶಕ್ಕೆ ಶಾಸಕರು ತುತ್ತಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ‌ ಮಾಂಬಳ್ಳಿ ಗ್ರಾಮದಲ್ಲಿ ಕಳೆದ ವಾರ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯ ದಿಂದ ಹೊರ ಬಿಟ್ಟ ಅಪಾರ ಪ್ರಮಾಣದ ನೀರಿನಿಂದ ಮಾಂಬಳ್ಳಿ ಗ್ರಾಮದ ಹೆದ್ದಾರಿಯಲ್ಲಿ ಮುಕ್ಕಾಲು ಅಡಿ ನೀರು ಹರಿಯುತ್ತಿದ್ದು, ಆ ನೀರಿನಲ್ಲಿ ತೆಪ್ಪದ ಮೇಲೆ ಕುಳಿತ ಶಾಸಕ ಎನ್‌ಮಹೇಶ್, ಮಾಂಬಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಾದೇಗೌಡ ಮತ್ತು ಬಿಜೆಪಿ ಮುಖಂಡ ಮಾಂಬಳ್ಳಿ ನಂಜುಂಡ ಸ್ವಾಮಿ ಕುಳಿತು ಬೆಂಬಲಿಗರ ಮೂಲಕ ತೆಪ್ಪ ಎಳಸಿಕೊಂಡು ಹೋದ ವೀಡಿಯೋ ಇದೀಗ ವೈರಲ್ ಆಗಿದ್ದು, ಶಾಸಕರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.


Spread the love

Leave a Reply

Please enter your comment!
Please enter your name here