ಮುಡಾ ಕಚೇರಿ ಸಿಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Spread the love

ಮುಡಾ ಕಚೇರಿ ಸಿಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಯೊಬ್ಬರು ಇಲ್ಲಿನ ಮುಡಾ ಕಚೇರಿ ಉರ್ವದ ಸ್ಟೋರ್ ರೂಂನಲ್ಲಿ ಜೂನ್ 2 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಮೃತರನ್ನು ಪಡೀಲ್ ಮೂಲದ ಕೀರ್ತನ್ (30) ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ, ಜೂನ್ 2 ರಂದು ಬೆಳಿಗ್ಗೆ 9:30 ರ ಸುಮಾರಿಗೆ ಕೀರ್ತನ್ ಅವರು ಕಚೇರಿಗೆ ಬಂದು ತಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡಿದ್ದರು. ಸ್ವಲ್ಪ ಸಮಯದ ನಂತರ ಕೀರ್ತನ್ ನಾಪತ್ತೆಯಾಗಿದ್ದು ಚಹಾ ಕುಡಿಯಲು ಹೊರಗೆ ಹೋಗಿರಬಹುದು ಎಂದು ಕಚೇರಿ ಸಿಬ್ಬಂದಿ ಭಾವಿಸಿದ್ದರು. ಆದರೆ ಮಧ್ಯಾಹ್ನ 12 ಗಂಟೆಯಾದರೂ ವಾಪಸ್ ಬಂದಿರಲಿಲ್ಲ

ನಂತರ ಕಚೇರಿ ಸಿಬ್ಬಂದಿ ಆತನ ಮೊಬೈಲ್ ಸ್ಥಳವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದಾಗ ಅದು ಮುಡಾ ಆವರಣದಲ್ಲಿತ್ತು. ಕೀರ್ತನ್ಗಾಗಿ ಹುಡುಕಾಟ ನಡೆಸಿದಾಗ ಸ್ಟೋರ್ ರೂಮ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಉರ್ವ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.


Spread the love