ಮುದ್ದೆ, ಹುರುಳಿ ಸಾಂಬಾರ್ ಸೇವಿಸಿ ಕಾರ್ಮಿಕರು ಅಸ್ವಸ್ಥ

Spread the love

ಮುದ್ದೆ, ಹುರುಳಿ ಸಾಂಬಾರ್ ಸೇವಿಸಿ ಕಾರ್ಮಿಕರು ಅಸ್ವಸ್ಥ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಜಮೀನೊಂದಕ್ಕೆ ಕೆಲಸಕ್ಕೆ ತೆರಳಿದ್ದ ಕೂಲಿ ಕಾರ್ಮಿಕರು ಆಹಾರ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಜಮೀನಿನ ಮಾಲೀಕ ಸುರೇಶ್, ಈತನ ಕುಟುಂಬದವರಾದ ಚಿಕ್ಕಮ್ಮ, ಕನ್ಯಾ, ಭಾಗ್ಯ, ಮಂಜುನಾಥ್, ಕೂಲಿ ಕಾರ್ಮಿರಾದ ಮಹದೇವಮ್ಮ, ಭಾಗ್ಯ, ರಾಜಮ್ಮ, ಚಿಕ್ಕಮ್ಮ, ದೊಡ್ಡಮ್ಮ, ರಾಜಮ್ಮ, ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವವರು.

ಗ್ರಾಮದ ಸುರೇಶ್ ಎಂಬುವರ ಜಮೀನಿಗೆ ತೆರಳಿದ್ದ ಕೂಲಿ ಕಾರ್ಮಿಕರು ಮಧ್ಯಾಹ್ನದ ಹೊತ್ತಿನ ಊಟಕ್ಕೆ ಮುದ್ದೆ, ಹುರುಳಿ ಸಾಂಬಾರ್ ತಿಂದಿದ್ದಾರೆ ಎನ್ನಲಾಗಿದೆ. ಕೆಲಸ ಮುಗಿಸಿ ಮನೆಗೆ ತೆರಳಿದ ಬಳಿಕ 6 ಮಂದಿ ಕಾರ್ಮಿಕರಿಗೆ ತಡರಾತ್ರಿಯಾಗುತ್ತಿದ್ದಂತೆಯೇ ವಾಂತಿ, ಭೆೇದಿ ಕಾಣಿಸಿಕೊಂಡಿದೆ. ಇನ್ನೂ ಜಮೀನಿನ ಮಾಲೀಕ ಸುರೇಶ್ ಸೇರಿದಂತೆ ಕುಟುಂಬದವರಾದ 4 ಮಂದಿಯೂ ಇದೇ ಊಟವನ್ನೆ ಸೇವಿಸಿದ್ದು ಅವರು ಕೂಡ ಅಸ್ವಸ್ಥಗೊಂಡು ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಾದರು.

ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ 11 ಮಂದಿ ಅಸ್ವಸ್ಥರನ್ನು ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಚಾರ ತಿಳಿದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರು ಆಸ್ಪತ್ರೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ.


Spread the love