ಮುಲ್ಕಿ: ತಾಯಿ, ಮಗನ ಪತ್ತೆಗೆ ಕೋರಿಕೆ

Spread the love

ಮುಲ್ಕಿ: ತಾಯಿ, ಮಗನ ಪತ್ತೆಗೆ ಕೋರಿಕೆ

ಮಂಗಳೂರು: ತಾಲೂಕಿನ ಹಳೆಯಂಗಡಿ ಗ್ರಾಮದ ಮರಿಯಾ ಗ್ಲಾಸ್ ಹೌಸ್ ಬಳಿಯ ಕುದ್ರು ಮನೆಯಲ್ಲಿ ವಾಸವಾಗಿದ್ದ ಶರ್ಮಿಳಾ (27 ವರ್ಷ) ಹಾಗೂ ಅವರ ಮಗ ವಿಶ್ವತ್ (4 ವರ್ಷ) ಎಂಬವರು 2022ರ ಜುಲೈ 21 ರಿಂದ ಕಾಣೆಯಾದ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಹರೆ ಇಂತಿದೆ:
ಶರ್ಮಿಳಾ: 5.2 ಅಡಿ ಎತ್ತರ, ಗೋಧಿ ಮೈ ಬಣ್ಣ, ಸಪೂರ ಶರೀರ ಹಾಗೂ ಚೂಡಿದಾರ ಧರಿಸಿರುತ್ತಾರೆ. 8ನೇ ತರಗತಿವರೆಗೆ ವ್ಯಾಸಂಗ ಮಾಡಿಕೊಂಡಿದ್ದು, ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ.

ವಿಶ್ವತ್: 74 ಸೆಂ.ಮೀ ಎತ್ತರ, ಕಪ್ಪು ಮೈ ಬಣ್ಣ, ಕಪ್ಪು ಕೂದಲು, ಕೋಲು ಮುಖ ಹಾಗೂ ಸಾಧಾರಣ ಮೈ ಕಟ್ಟು ಹೊಂದಿರುತ್ತಾರೆ. ಜೀನ್ಸ್ ಪ್ಯಾಂಟ್ ಶರ್ಟ್ ಧರಿಸಿರುತ್ತಾರೆ, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರಕಿದಲ್ಲಿ ಮುಲ್ಕಿ ಪೆÇಲೀಸ್ ಠಾಣೆ ಅಥವಾ ಕಂಟ್ರೋಲ್ ರೂಂ.ಸಂಖ್ಯೆ: 0824-2220800, ಠಾಣಾಧಿಕಾರಿ ಮೊ.ಸಂಖ್ಯೆ: 9480805359, 9480805332 ಅಥವಾ ಠಾಣೆಯ ದೂ.ಸಂಖ್ಯೆ: 0824-2290533 ಮೂಲಕ ಸಂಪರ್ಕಿಸುವಂತೆ ಮುಲ್ಕಿ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love