
ಮುಲ್ಕಿ ತಾಲೂಕು ಎಸ್ ಸಿ/ಎಸ್ ಟಿ ಪಂಗಡದ ವಸತಿ ನಿಲಯಕ್ಕೆ ಲೋಕಾಯುಕ್ತ ಅಧಿಕಾರಿಗಳ ಭೇಟಿ
ಮಂಗಳೂರು: ಲೋಕಾಯುಕ್ತ ಅಧೀಕ್ಷಕರಾದ ಸಿ ಎ ಸೈಮನ್ ಅವರು ಮುಲ್ಕಿ ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜನವರಿ 31 ರಂದು ಬೆಳಿಗ್ಗೆ 11-00 ಗಂಟೆಯಿಂದ ಅಪರಾಹ್ನ 1-00 ಗಂಟೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿಗೆ ಸಂಬಂಧಪಟ್ಟಂತೆ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯನ್ನು ಮುಲ್ಕಿ ಸಮುದಾಯ ಭವನದ ಸಭಾಂಗಣದಲ್ಲಿ ಸಿ.ಎ. ಸೈಮನ್ ಪೋಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ ಮಂಗಳೂರು ಇವರ ಉಪಸ್ಥಿತಿಯಲ್ಲಿ ನಡೆದಿದ್ದು, ಸದರಿ ಸಭೆಯಲ್ಲಿ ಕಲಾವತಿ, ಪೊಲೀಸ್ ಉಪಾಧೀಕ್ಷಕರು ಚಲುವರಾಜು ಬಿ. ಪೊಲೀಸ್ ಉಪಾಧೀಕ್ಷಕರು ಮತ್ತು ಮುಲ್ಕಿ ತಾಲೂಕಿನ ತಹಶೀಲ್ದಾರರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಮುಲ್ಕಿ ತಾಲೂಕಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಸ್ವೀಕೃತವಾಗಿದ್ದು, ದೂರುಗಳು ಪ್ರಮುಖವಾಗಿ ದೂರುಗಳು ಇಲಾಖೆ, ಪುರಸಭೆಗೆ ಸಂಬಂಧಿಸಿದ್ದು ಇರುತ್ತದೆ. ಕೆಲವು ದೂರುಗಳನ್ನು ಸ್ಥಳದಲ್ಲೇ ಪರಿಸಹರಿಸಲಾಗಿದ್ದು ಉಳಿಕೆ ದೂರುಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದು ಇರುತ್ತದೆ.
ಇದೇ ವೇಳೆ ಮುಲ್ಕಿ ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿ ಸದರಿ ವಸತಿ ನಿಲಯವು ನೈರ್ಮಲ್ಯ ಮತ್ತು ಸ್ವಚ್ಚತೆಯಿಂದ ಕೂಡಿರದೇ ಇದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.