ಮುಸುಕುಧಾರಿಗಳಿಂದ ಮೀನು ವ್ಯಾಪಾರಿಯ ಟೆಂಪೋ ಅಡ್ಡಗಟ್ಟಿ ಹಲ್ಲೆ ನಡೆಸಿ ರೂ 2.15 ಲಕ್ಷ ನಗದು ದರೋಡೆ

Spread the love

ಮುಸುಕುಧಾರಿಗಳಿಂದ ಮೀನು ವ್ಯಾಪಾರಿಯ ಟೆಂಪೋ ಅಡ್ಡಗಟ್ಟಿ ಹಲ್ಲೆ ನಡೆಸಿ ರೂ 2.15 ಲಕ್ಷ ನಗದು ದರೋಡೆ

ಮಂಗಳೂರು: ಮೀನು ವ್ಯಾಪಾರಿಯೊಬ್ಬರ ಟೆಂಪೊ ಅಡ್ಡಗಡ್ಡಿ ಅವರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿ ರೂ 2.15 ಲಕ್ಷ ನಗದು ದೋಚಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ಅಡಂಕುದ್ರು ಎಂಬಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಉಳ್ಳಾಲ ಮುಕ್ಕಚ್ಚೇರಿಯ ಮೀನಿನ ವ್ಯಪಾರಿ ಮುಸ್ತಾಫ ಎಂಬವರು ಹಲ್ಲೆಗೊಳಾದವರು.

ಶನಿವಾರ ಮುಂಜಾನೆ ತೊಕ್ಕೊಟ್ಟು ಬಳಿಯ ಕಲ್ಲಾಪುವಿನಲ್ಲಿ ಮೀನು ವ್ಯಾಪಾರ ಮಾಡುತ್ತಿರುವು ಮುಸ್ತಾಫ ಅವರು ತನ್ನ ಟೆಂಪೊದಲ್ಲಿ ದಕ್ಕೆಗೆ ಮೀನು ಖರಿದಿಸಲು ಹೋಗುತ್ತಿದ್ದ ವೇಳೆ ಕೆಂಪು ಬಣ್ಣದ ಕಾರೊಂದು ಇವರನನು ಅಡ್ಡಗಟ್ಟಿದೆ. ಕಾರಿನಲ್ಲಿ ಇದ್ದ ಮೂವರು ಮುಸುಕುದಾರಿಗಳ ತಂಡದ ಪೈಕಿ ಇಬ್ಬರು ಕೆಳಗಿಳಿದು ಹಣದ ಬ್ಯಾಗ ನೀಡುವಂತೆ ಬೆದರಿಸಿದ್ದು, ಕೊಡಲು ನಿರಾಕರಿಸಿದ್ದಕ್ಕಾಗಿ ಮುಸ್ತಾಫ ಅವರ ಮೇಲೆ ದುಷ್ಕರ್ಮಿಗಳು ತಲವಾರು ಬೀಡಿದ್ದು ಆಗ ಅವರ ಕೈಗಳಿಗೆ ಗಾಯಗಳಾಗಿದೆ. ಇದೇ ವೇಳೆ ಮುಸ್ಥಾಫ ಅವರ ಬಳಿ ಇದ್ದ 2 ಲಕ್ಷ 15 ಸಾವಿರ ರೂಪಾಯಿಗಳು ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ ಎಂದು ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ

ಈ ಬಗ್ಗೆ ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


Spread the love