ಮೂಕ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಅಭಿಯಾನ

Spread the love

ಮೂಕ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಅಭಿಯಾನ

ಮೈಸೂರು: ಚಾಮುಂಡಿಬೆಟ್ಟ ತಪ್ಪಲು ಸೇರಿದಂತೆ ನಗರದ ಹಲವೆಡೆ ಪ್ರಾಣಿಪಕ್ಷಿಗಳಿಗೆ ನೀರುಣಿಸುವ ಕಾರ್ಯವನ್ನು ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಮಾಡುತ್ತಾ ಬಂದಿದ್ದು, ಈಗಾಗಲೇ ನಗರದಲ್ಲಿ 30 ನೀರಿನ ತೊಟ್ಟಿಯನ್ನು ಅಳವಡಿಸುವ ಮೂಲಕ ಪಕ್ಷಿ ಪ್ರಾಣಿಗಳಿಗೆ ನೀರುಣಿಸುವ ಕೆಲಸವನ್ನು ಮಾಡಲಾಗಿದೆ.

ಈ ಕುರಿತಂತೆ ಮಾತನಾಡಿದ ಕೆ ಎಮ್ ಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ ಸತತ 4 ವರ್ಷದಿಂದ ನೀರುಣಿಸುವ ಅಭಿಯಾನವನ್ನು ಸ್ನೇಹಿತರೊಡನೆ ಸೇರಿ ಮಾಡುತ್ತಾ ಬಂದಿದ್ದೇವೆ, ಈಗಾಗಲೇ ಮೈಸೂರು ನಗರದಲ್ಲಿ ಚಾಮುಂಡಿ ಬೆಟ್ಟದ ತಪಲು, ಕೆಲವು ಸರ್ಕಾರಿ ಶಾಲೆಯಲ್ಲಿ, ಜಲ್ ಪುರಿ ಕ್ವಾಟ್ರಸ್, ಸಿದ್ದಾರ್ಥ ಲೇಔಟ್, ಸೇರಿದಂತೆ ಇನ್ನಿತರ ಭಾಗದಲ್ಲಿ 30ಕ್ಕೂ ಹೆಚ್ಚು ನೀರಿನ ತೊಟ್ಟಿಗಳನ್ನು ಅಳವಡಿಸಿದ್ದೇವೆ, ಸ್ಥಳೀಯ ಅಂಗಡಿ ಮಾಲೀಕರಿಗೆ ಅದರ ನಿರ್ವಹಣಾ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ಮನವಿ ಮಾಡಲಾಯಿತು,

ನಮ್ಮ ಈ ಅಭಿಯಾನಕ್ಕೆ ಯುವಕರು ಸ್ವಯಂ ಪ್ರೇರಣೆಯಿಂದ ಬೇಸಿಗೆಯಲ್ಲಿ ಪಕ್ಷಿಗಳಿಗೆ ಹಾಗೂ ಪ್ರಾಣಿಗಳಿಗೆ ನೀರುಣಿಸಲು ಮುಂದೆ ಬಂದಿದ್ದಾರೆ. ಬೇಸಿಗೆ ಮುಂದುವರೆದಿದ್ದು, ಸಾರ್ವಜನಿಕರ ಸ್ಥಳಗಳಲ್ಲಿ ಪ್ರಾಣಿ, ಪಕ್ಷಿಗಳಿಗೂ ನೀರು ಸಿಗುವುದು ಕಷ್ಟ. ಹಾಗಾಗಿ ಬೇಸಿಗೆ ಮುಗಿಯುವವರೆಗೂ ಪ್ರಾಣಿ, ಪಕ್ಷಿಗಳಿಗೆ ದಾಹ ನೀಗಿಸಲು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಅಲ್ಲಲ್ಲಿ ತೆರೆದ ಬಾಟಲ್‌ಗಳಲ್ಲಿ ನೀರು ಇಟ್ಟು ಪ್ರಾಣಿ, ಪಕ್ಷಿಗಳ ದಾಹ ನೀಗಿಸುವ ಕಾರ‍್ಯ ಮಾಡಬೇಕು ಎಂದು ಮನವಿ ಮಾಡಿದರು

ಇದೇ ಸಂದರ್ಭದಲ್ಲಿ ಉದ್ಯಮಿ ರಾಜೇಶ್ ಪಳನಿ, ಅಹಿಂದ ಮುಖಂಡರಾದ ನಟರಾಜ್, ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜಿ ಎಮ್ ಪಂಚಾಕ್ಷರಿ, ಕಡಕೋಳ ಜಗದೀಶ್, ಜಿ ರಾಘವೇಂದ್ರ, ಸೈಯದ್ ಸಾಧಿಕ್, ರವಿಚಂದ್ರ, ನಂದೀಶ್ ನಾಯಕ್, ಮಹೇಶ್, ನವೀನ್ ಕೆಂಪಿ, ಹಾಗೂ ಇನ್ನಿತರರು ಇದ್ದರು.


Spread the love

Leave a Reply

Please enter your comment!
Please enter your name here