ಮೂಡಬಿದಿರೆಯ ಕೊರ್ಪುಸ್ ಕ್ರಿಸ್ಟಿ ಚರ್ಚ್ ಸುವರ್ಣ ಮಹೋತ್ಸವ ವರ್ಷಾಚರಣೆಯ ಉದ್ಘಾಟನೆ

Spread the love

ಮೂಡಬಿದಿರೆಯ ಕೊರ್ಪುಸ್ ಕ್ರಿಸ್ಟಿ ಚರ್ಚ್ ಸುವರ್ಣ ಮಹೋತ್ಸವ ವರ್ಷಾಚರಣೆಯ ಉದ್ಘಾಟನೆ

ಮೂಡುಬಿದಿರೆ: ಮೂಡಬಿದಿರೆಯ ಕೊರ್ಪುಸ್ ಕ್ರಿಸ್ಟಿ ಚರ್ಚ್ನ ಸುವರ್ಣ ಮಹೋತ್ಸವ ವರ್ಷವನ್ನು ಡಿಸೆಂಬರ್ 31, 2020 ರಂದು ರಾತ್ರಿ 8 ಗಂಟೆಗೆ ಜ್ಯೂಬಿಲಿ ಲೋಗೋ ವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.

ವಂದನೀಯ ಫಾI ಪೌಲ್ ಸಿಕ್ವೇರಾ, ಚರ್ಚ್ ಫಾದರ್, ಹಾಗೂ ಫಾI. ಜೋಸೆಫ್ ಏಂಜೆಲೋ ಬಲಿ ಪೂಜೆಯನ್ನು ನಡೆಸಿಕೊಟ್ಟರು

ವಂದನೀಯ ಫಾI ಪೌಲ್ ಸಿಕ್ವೇರಾ “ತಾಯಿ ಮೇರಿ ಯೇಸುವಿನ ತಾಯಿ ಮತ್ತು ನಮ್ಮ ತಾಯಿ. ಹೊಸ ವರ್ಷ ಬಂದಾಗ ತಾಯಿ ಮೇರಿಯೊಡನೆ ಪ್ರಯಾಣ ಮಾಡುವ ಭಾಗ್ಯ ನಮ್ಮದಾಗಲಿ” ಎಂಬ ಸಂದೇಶ ಕೊಟ್ಟರು.

ಸಾಮೂಹಿಕ ಪ್ರಾರ್ಥನೆಯ ನಂತರ ಚರ್ಚ್ನ ಸುವರ್ಣ ಮಹೋತ್ಸವ ಸಮಿತಿ ಸಂಚಾಲಕರು ಲಾಂಛನವನ್ನು ಅನಾವರಣಗೊಳಿಸಿದರು. ಲಾಂಛನವನ್ನು ತಯಾರಿಸದ ಶ್ರೀ ವಿನ್ಸೆಂಟ್ ಮಸ್ಕರೇನಸ್ ಅವರು, ಲಾಂಛನದ ಬಗ್ಗೆ ವಿವರಿಸಿ, ಸುವರ್ಣ ಮಹೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲಾ ಸಮಿತಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುವ ಅವಶ್ಯಕತೆಯನ್ನು ವಿವರಿಸಿದರು.

ಈ ಉದ್ಘಾಟನಾ ಸಮಾರಂಭ ಮತ್ತು ಸಾಮೂಹಿಕ ಪ್ರಾರ್ಥನೆಗೆ ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ಶ್ರೀ ಜೋನ್ ಮೆನೆಜಸ್, ಕಾರ್ಯದರ್ಶಿ   ರೊನಾಲ್ಡ್ ಸೆರಾವೋ, ಸಮಿತಿಯ ಎಲ್ಲಾ ಸಂಚಾಲಕರು ಮತ್ತು ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು.

ಮೇ 6, 2021ರಂದು ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ.

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ, ನಿವೃತ್ತ ಬಿಷಪ್ ಅತೀ ವಂದನೀಯ ಡಾ. ಅಲೋಸಿಯಸ್ ಪೌಲ್ ಡಿ’ಸೋಜಾ, ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.


Spread the love