ಮೂಡಬಿದ್ರೆಯಲ್ಲಿ ಅನೈತಿಕ ಪೊಲೀಸ್‌ ಗಿರಿ – ಇಬ್ಬರ ಬಂಧನ

Spread the love

ಮೂಡಬಿದ್ರೆಯಲ್ಲಿ ಅನೈತಿಕ ಪೊಲೀಸ್‌ ಗಿರಿ – ಇಬ್ಬರ ಬಂಧನ

ಮೂಡಬಿದ್ರೆ: ನಗರದ ಹೊರವಲಯದ ಮೂಡುಬಿದಿರೆಯಲ್ಲಿ ವಿಭಿನ್ನ ಕೋಮಿನವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದು ಅನೈತಿಕ ಪೊಲೀಸ್‌ಗಿರಿ ನಡೆಸಿದ ಘಟನೆ ವರದಿಯಾಗಿದೆ.

ಶನಿವಾರ ಮಧ್ಯಾಹ್ನ ವ್ಯಕ್ತಿಯೋರ್ವರು ತನ್ನ ಪತ್ನಿ ಹಾಗೂ ಇತರ ಇಬ್ಬರು ಅನ್ಯಕೋಮಿನ ಯುವತಿಯರೊಂದಿಗೆ ತೆರಳುತ್ತಿದ್ದ ವೇಳೆ ಮೂಡಬಿದ್ರೆ ಸಮೀಪ ಆರರಿಂದ ಎಂಟು ಮಂದಿಯ ತಂಡ ಕಾರನ್ನು ಸುತ್ತುವರಿದು ಕಾರಿನಲ್ಲಿದ್ದವರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಭಾರತೀಯ ದಂಡ ಸಂಹಿತೆ 354 (ಹಲ್ಲೆ), 153 ಎ (ಧಾರ್ಮಿಕ ಹಕ್ಕುಗಳ ಉಲ್ಲಂಘನೆ), 504 (ನಿಂದನೆ), 506 (ಕೊಲೆ ಬೆದರಿಕೆ) ಸೆಕ್ಷನ್‌ಗಳ ಅಡಿಯಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು , ಇಬ್ಬರನ್ನು ಬಂಧಿಸಿದ್ದು ಇನ್ನುಳಿದ ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ


Spread the love