ಮೂಡಿಗೆರೆ ಶಾಸಕರ ಕಾರು ಡಿಕ್ಕಿ: ಮಹಿಳೆ ಸಾವು

Spread the love

ಮೂಡಿಗೆರೆ ಶಾಸಕರ ಕಾರು ಡಿಕ್ಕಿ: ಮಹಿಳೆ ಸಾವು

ಬೇಲೂರು: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಸೇರಿದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನ ಹಿಂಬದಿ ಕುಳಿತಿದ್ದ ಮಹಿಳೆ ಸಾವನ್ನಪ್ಪಿ, ಸವಾರ ಗಂಭೀರ ಗಾಯಗೊಂಡಿರುವ ಘಟನೆ ಬೇಲೂರಿನಲ್ಲಿ ನಡೆದಿದೆ.

ಬೇಲೂರು ತಾಲೂಕಿನ ಬಿರಟೇಮನೆ ಗ್ರಾಮದ ಸುಬ್ಬೇಗೌಡ ಅವರ ಪತ್ನಿ ಹೂವಮ್ಮ (೫೮) ಮೃತಪಟ್ಟ ಮಹಿಳೆ. ಇವರು ಬೈಕ್ ನಲ್ಲಿ ತನ್ನ ಮೊಮ್ಮಗ ಪ್ರೀತಂ ಜೊತೆ ಪಟ್ಟಣದ ಸಮೀಪ ಇರುವ ಹನುಮಂತನಗರ ಮನೆಗೆ ಬರುತ್ತಿದ್ದ ವೇಳೆ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಅವರಿಗೆ ಸೇರಿದ ಕಾರು ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ವೇಗವಾಗಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದ್ದು, ಪರಿಣಾಮವಾಗಿ ಸ್ಥಳದಲ್ಲೇ ಹೂವಮ್ಮ ಸಾವನ್ನಪ್ಪಿದ್ದು ಮೊಮ್ಮಗ ಪ್ರೀತಂ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಬೇಲೂರು ಪೋಲೀಸರು ಭೇಟಿ ನೀಡಿ ವಾಹನ ಹಾಗೂ ಚಾಲಕ ಪ್ರವೀಣ್ ನನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತವಾದ ಸಂದರ್ಭದಲ್ಲಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಕಾರಿನಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ.


Spread the love