ಮೂಡುಬಿದಿರೆ: ‘ಮಹಿಳೆಯರಿಗೆ ಸ್ವರಕ್ಷಾ’ ಕಾರ್ಯಗಾರ

Spread the love

ಮೂಡುಬಿದಿರೆ: ‘ಮಹಿಳೆಯರಿಗೆ ಸ್ವರಕ್ಷಾ’ ಕಾರ್ಯಗಾರ

ಮೂಡುಬಿದಿರೆ: ಮಾನಸಿಕ ದೌರ್ಜನ್ಯವು ದೈಹಿಕ ದೌರ್ಜನ್ಯಕ್ಕಿಂತ ತೀವ್ರವಾದುದ್ದು. ಇದನ್ನು ತಡೆಯುವಲ್ಲಿ ವಿದ್ಯಾರ್ಥಿನಿಯರು ಮಾನಸಿಕವಾಗಿ ಸದಾ ಸಿದ್ದರಿರಬೇಕು ಎಂದು ಮಹಿಳಾ ಸ್ವರಕ್ಷಾ ಟ್ರಸ್ಟ್‍ನ ಸ್ಥಾಪಕ ಕಾರ್ತಿಕ್ ಎಸ್ ಕಟೀಲ್ ತಿಳಿಸಿದರು.

ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಂಘವು ಆಯೋಜಿಸಿದ್ದ ‘’ಸ್ವರಕ್ಷಣೆಯ ತರಬೇತಿ’’ ಕಾರ್ಯಗಾರದಲ್ಲಿ ವಿದ್ಯಾರ್ಥಿನಿಯರನ್ನುದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸ್ಮಾರ್ಟಫೋನ್‍ಗಳನ್ನು ಪೋಷಕರ ಹಾಗೂ ಶಿಕ್ಷಕರ ಸಲಹೆ ಪಡೆದು ಉಪಯೋಗಿಸುವುದರಿಂದ ಸಾಮಾನ್ಯವಾಗಿ ಎದುರಿಸುವ ದೌರ್ಜನ್ಯಗಳನ್ನು ತಡೆಗಟ್ಟಬಹುದು. ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆಯಬಹುದಾದ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳನ್ನು ಎದುರಿಸಲು ವಿದ್ಯಾರ್ಥಿನಿಯರು ಸನ್ನದ್ಧರಾಗಿರಬೇಕು. ಸ್ವರಕ್ಷಾ ಕೌಶಲ್ಯಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳುವುದರ ಮೂಲಕ ಮಹಿಳೆಯರು ತಮ್ಮ ರಕ್ಷಣೆಯನ್ನೆ ತಾವೇ ಮಾಡಿಕೊಳ್ಳಬಹುದು ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಂಘದ ಸಂಯೋಜಕಿ ವಿನೆಟ್ ಮಾಸ್ಕರೇನಸ್, ಮಹಿಳಾ ಸ್ವರಕ್ಷಾ ಟ್ರಸ್ಟ್‍ನ ಶುಭಲತಾ, ವೇದಿಕೆಯಲ್ಲಿ ಉಪಸ್ಥಿರಿದ್ದರು. ಹನಿ ಲೋಕೇಶ್ ಕಾರ್ಯಕ್ರಮ ನಿರೂಪಿಸಿ, ಝುಲೇಕಾ ಸ್ವಾಗತಿಸಿ, ಸೃಷ್ಟಿ ವಂದಿಸಿದರು.


Spread the love