
ಮೂಡುಬಿದಿರೆ ವಲಯದ ಕಥೋಲಿಕ ಯುವಜನರ ಸಮಾವೇಶ
13 ಆಗಸ್ಟ್ 2023 ರಂದು ಪಾಲಡ್ಕ ಚರ್ಚ್ ಸಭಾಭವನದಲ್ಲಿ ‘ಅಂತಾರಾಷ್ಟ್ರೀಯ ಯುವ ದಿವಸ’ ಪ್ರಯುಕ್ತ ‘ಯುವ ಸ್ಪರ್ಷ 2023’ ಕಾರ್ಯಕ್ರಮ, ಭಾರತೀಯ ಕಥೋಲಿಕ ಯುವ ಸಂಚಲನ ಮೂಡುಬಿದಿರೆ ವಲಯ ಹಾಗೂ ಪಾಲಡ್ಕ ಘಟಕದ ವತಿಯಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತೀ ವಂದನೀಯ ಗುರು ಒನಿಲ್ ಡಿಸೋಜ ವಹಿಸಿದ್ದರು.ಸಂ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕರು ವಂದನೀಯ ಗುರು ಸ್ಟ್ಯಾನಿ ಪಿಂಟೊ ಮುಖ್ಯ ಅತಿಥಿಗಳಾಗಿ ಯುವಜನರಲ್ಲಿ ಹೊಸ ಉತ್ಸಾಹವನ್ನು ತುಂಬಿಕೊಂಡರು.ಭಾರತೀಯ ಕಥೋಲಿಕ ಯುವ ಸಂಚಲನ ಮಂಗಳೂರು ಧರ್ಮಪ್ರಾಂತ್ಯದ ‘ಆಮ್ಚೊ ಯುವಕ್’ ಪತ್ರದ ಸಂಪಾದಕರು ಶ್ರೀ ಕಾಲಿನ್ ಡಿಸೋಜ, ಪಾಲಡ್ಕ ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಶ್ರೀಮತಿ ಮೆಟಿಲ್ಡಾ ಕಾರ್ಡೊಜ,21 ಆಯೋಗದ ಸಂಚಾಲಕರು ಶ್ರೀ ಡೆನಿಸ್ ಡಿಮೆಲ್ಲೊ,ಭಾ.ಕ.ಯು.ಸಂ ಪಾಲಡ್ಕ ಘಟಕದ ಸಚೇತಕರಾದ ಶ್ರೀ ಪ್ರವೀಣ್ ಸಿಕ್ವೇರಾ ಹಾಗೂ ಶ್ರೀ ಪ್ರಜ್ವಲ್ ಡಿಸೋಜ,ಭಾ.ಕ.ಯು.ಸಂ ಮೂಡುಬಿದಿರೆ ವಲಯದ ಅಧ್ಯಕ್ಷ ಶ್ರೀ ಬ್ರೆಂಡನ್ ಕುಟಿನ್ಹ ಹಾಗೂ ಕಾರ್ಯದರ್ಶಿ ಶ್ರೀ ವಿಜೋಯ್ ಕಾರ್ಡೊಜ ಉಪಸ್ಥಿತರಿದ್ದರು.
ಸುಮಾರು 180 ಯುವಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಸಮಾರೋಪ ಕಾರ್ಯಕ್ರಮದಲ್ಲಿ ಪಾಲಡ್ಕ ಚರ್ಚ್ ಧರ್ಮಗುರು ವಂದನೀಯ ಎಲಿಯಾಸ್ ಡಿಸೋಜ ಹಾಗೂ ಉಪಾಧ್ಯಕ್ಷರು ಶ್ರೀ ಅವಿಲ್ ಡಿಸೋಜ,ಭಾ.ಕ.ಯು.ಸಂ ಮಂಗಳೂರು ಧರ್ಮಪ್ರಾಂತ್ಯದ ಖಜಾಂಚಿ ಶ್ರೀ ಸುಶಾಂತ್ ಫೆರ್ನಾಂಡಿಸ್, ನಿಕಟ ಪೂರ್ವ ಅಧ್ಯಕ್ಷರು ಆನಿಲ್ ಸಿಕ್ವೇರಾ ಹಾಜರಿದ್ದರು.
ಭಾ.ಕ.ಯು.ಸಂ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರು ಶ್ರೀ ಮೀತೇಶ್ ಡಿಸೋಜ ಹಾಗೂ ಕಾರ್ಯದರ್ಶಿ ಕುಮಾರಿ ವಿಲ್ಮಾ ಲೋಬೊ ಭಾಗವಹಿಸಿ ಶುಭ ಹಾರೈಸಿದರು.