ಮೂಡುಬಿದಿರೆ: ಸಿಇಟಿಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

Spread the love

ಮೂಡುಬಿದಿರೆ: ಸಿಇಟಿಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ: ಕರ್ನಾಟಕ ಸರಕಾರ ನಡೆಸಿದ ಸಿಇಟಿ 2023 ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 2,127 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ಸಿಇಟಿಯ ವಿವಿಧ ವಿಭಾಗಗಳಲ್ಲಿ ಅನೇಕ ಉತ್ತಮ ರ್ಯಾಂಕ್‍ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಅದಿತಿ ಕೃಷಿಯಲ್ಲಿ 11ನೇ ರ್ಯಾಂಕ್, ನ್ಯಾಚುರೋಪತಿಯಲ್ಲಿ 14ನೇ ರ್ಯಾಂಕ್, ಪಶುವೈದ್ಯಕೀಯದಲ್ಲಿ 48ನೇ ರ್ಯಾಂಕ್, ನರ್ಸಿಂಗ್‍ನಲ್ಲಿ 48ನೇ ರ್ಯಾಂಕ್, ಬಿ.ಫಾರ್ಮ್‍ನಲ್ಲಿ 99ನೇ ರ್ಯಾಂಕ್ ಮತ್ತು ಡಿ. ಫಾರ್ಮದಲ್ಲಿ 99ನೇ ರ್ಯಾಂಕ್ ಹಾಗೂ ಎಂಜಿನಿಯರಿಂಗ್‍ನಲ್ಲಿ 100ನೇ ರ್ಯಾಂಕ್ ಪಡೆದಿರುತ್ತಾರೆ.

ಮುಕುಂದ್ ಕೃಷಿಯಲ್ಲಿ 51ನೇ ರ್ಯಾಂಕ್, ಪ್ರಜ್ವಲ್ ಎಸ್.ಬಿ. ನರ್ಸಿಂಗ್‍ನಲ್ಲಿ 95ನೇ ರ್ಯಾಂಕ್ ಮತ್ತು ಪಶುವೈದ್ಯಕೀಯದಲ್ಲಿ 95ನೇ ರ್ಯಾಂಕ್, ಪ್ರಚಿತ ಕೃಷಿಯಲ್ಲಿ 100ನೇ ರ್ಯಾಂಕ್ ಪಡೆದು ಸಂಸ್ಥೆಗೆ ಹೆಮ್ಮೆ ತಂದಿರುತ್ತಾರೆ.

ಪಿಸಿಬಿ ಮತ್ತು ಪಿಸಿಎಂ ಸೇರಿದಂತೆ ಒಟ್ಟು 8 ವಿದ್ಯಾರ್ಥಿಗಳು 180ರಲ್ಲಿ 150ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದಾರೆ. 39 ವಿದ್ಯಾರ್ಥಿಗಳು 180ರಲ್ಲಿ 140ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದಾರೆ. 618 ವಿದ್ಯಾರ್ಥಿಗಳು 180ರಲ್ಲಿ 120ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದಾರೆ. 1,539 ವಿದ್ಯಾರ್ಥಿಗಳು 180ರಲ್ಲಿ 100ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದಾರೆ.

ಸಿಇಟಿ ಫಲಿತಾಂಶದ ಮೊದಲ 50 ರ್ಯಾಂಕ್‍ಗಳಲ್ಲಿ ಆಳ್ವಾಸ್ ಕಾಲೇಜಿಗೆ 04, ಮೊದಲ 100 ರ್ಯಾಂಕ್‍ಗಳಲ್ಲಿ 11, ಮೊದಲ 200 ರ್ಯಾಂಕ್‍ಗಳಲ್ಲಿ 38, ಮೊದಲ 300 ರ್ಯಾಂಕ್‍ಗಳಲ್ಲಿ 59, ಮೊದಲ 400 ರ್ಯಾಂಕ್‍ಗಳಲ್ಲಿ 103, ಮೊದಲ 500 ರ್ಯಾಂಕ್‍ಗಳಲ್ಲಿ 128, ಮೊದಲ 1,000 ರ್ಯಾಂಕ್‍ಗಳಲ್ಲಿ 345, ಮೊದಲ 2,000 ರ್ಯಾಂಕ್‍ಗಳಲ್ಲಿ 782, ಮೊದಲ 3,000 ರ್ಯಾಂಕ್‍ಗಳಲ್ಲಿ 1,207, ಮೊದಲ 4,000 ರ್ಯಾಂಕ್‍ಗಳಲ್ಲಿ 1,540, ಮೊದಲ 5,000 ರ್ಯಾಂಕ್‍ಗಳಲ್ಲಿ 1,893, ಮೊದಲ 10,000 ರ್ಯಾಂಕ್‍ಗಳಲ್ಲಿ 3,498 ರ್ಯಾಂಕ್‍ಗಳನ್ನು ಪಡೆದಿರುತ್ತಾರೆ.

ಈ ಎಲ್ಲ ವಿದ್ಯಾರ್ಥಿಗಳು ರಾಜ್ಯದ ನಾನಾ ಪ್ರತಿಷ್ಠಿತ ಎಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ, ನ್ಯಾಚುರೋಪತಿ, ಬಿ.ಫಾರ್ಮ ಹಾಗೂ ಡಿ. ಫಾರ್ಮದಲ್ಲಿ ನೇರ ಪ್ರವೇಶಾತಿ ಪಡೆಯಲು ಅರ್ಹರಾಗಿರುತ್ತಾರೆ.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ಎಂ. ಸದಾಕತ್ ಇದ್ದರು.


Spread the love