ಮೂಡ್ಲಕಟ್ಟೆ ವಿದ್ಯಾರ್ಥಿಗಳಿಂದ ಆಜಾದಿ ಕಾ ಅಮೃತ ಮಹೋತ್ಸವ ಬೈಕ್ ರ‍್ಯಾಲಿ

Spread the love

ಮೂಡ್ಲಕಟ್ಟೆ ವಿದ್ಯಾರ್ಥಿಗಳಿಂದ ಆಜಾದಿ ಕಾ ಅಮೃತ ಮಹೋತ್ಸವ ಬೈಕ್ ರ‍್ಯಾಲಿ

ಕುಂದಾಪುರ: ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳಿಂದ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಾಲೇಜಿನಿಂದ ಕುಂದಾಪುರದ ಶಾಸ್ತ್ರಿ ಸರ್ಕಲ್ ನ ವರೆಗೆ ಬೃಹತ್ ಪ್ರಮಾಣದ ಬೈಕ್ ರ‍್ಯಾಲಿಯು ಆಗಸ್ಟ್ 11 ರಂದು ನಡೆಸಲಾಯಿತು .ಕಾರ್ಯಕ್ರಮವನ್ನು ಕಾಲೇಜಿನ ಅಧ್ಯಕ್ಷರಾದ ಸಿದ್ದಾರ್ಥ ಜೆ.ಶೆಟ್ಟಿಯವರು ಉದ್ಘಾಟಿಸಿದರು.

ಕುಂದಾಪುರ ಗ್ರಾಮಾಂತರ ಠಾಣೆಯ ಪಿ ಎಸೈ ನಿರಂಜನ್ ಗೌಡ ಅವರು ರಸ್ತೆ ನಿಯಮ ಪಾಲನೆ, ಹೆಲ್ಮೆಟ್ ಬಳಕೆ, ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ನೀಡಿದರು.

ಕಾರ್ಯಕ್ರಮಕ್ಕೆ ಪ್ರಾಂಶುಪಾಲರಾದ ಡಾl ಚಂದ್ರ ರಾವ್ ಮದಾನೆ, ಉಪಪ್ರಾಂಶುಪಾಲರಾದ ಮೆಲ್ವಿನ್ ಡಿ’ಸೋಜಾ ಮತ್ತು ವಿಭಾಗದ ಮುಖ್ಯಸ್ಥರು, ಅಧ್ಯಾಪಕ ವೃಂದ ಉಪಸ್ಥಿತರಿದ್ದರು. ಈ ಮಹೋತ್ಸವದಲ್ಲಿ 50ಕ್ಕೂ ಹೆಚ್ಚು ಬೈಕ್ ಗಳು ಪಾಲ್ಗೊಂಡಿದ್ದು ಕುಂದಾಪುರ ಹೊಯ್ಸಳ ಪೊಲೀಸ್ ಇವರ ಸಹಕಾರದೊಂದಿಗೆ ಬೈಕ್ ರ‍್ಯಾಲಿಯು ಯಶಸ್ವಿಯಾಗಿ ನಡೆಯಿತು.


Spread the love