ಮೂರು ಗಂಟೆ ಸತತ ಮಳೆಗೆ ತತ್ತರಿಸಿದ ಮಂಗಳೂರು, ನಗರದಾದ್ಯಂತ ಕೃತಕ ನೆರೆ

Spread the love

ಮೂರು ಗಂಟೆ ಸತತ ಮಳೆಗೆ ತತ್ತರಿಸಿದ ಮಂಗಳೂರು, ನಗರದಾದ್ಯಂತ ಕೃತಕ ನೆರೆ

ಮಂಗಳೂರು: ಶನಿವಾರ ಬೆಳಗಿನ ಜಾವ ಗುಡುಗು ಸಹಿತವಾಗಿ ಸುಮಾರು ಮೂರು ಗಂಟೆಗಳ ಕಾಲ ಸುರಿದ ಮಳೆಗೆ ಮಂಗಳೂರು ಅಕ್ಷರಶಃ ನಲುಗಿದೆ.

ಬೆಳಗ್ಗೆ ಬಿಡದೆ ಸುರಿದ ಬಿರುಸಿನ ಮಳೆಯ ಕಾರಣದಿಂದ ಪಂಪ್ ವೆಲ್ ಸೇತುವೆ ಕೆಳಗೆ ನಾಲ್ಕು ಭಾಗದಲ್ಲೂ ನೀರು ತುಂಬಿ ಕೆರೆಯಂತಾಗಿದೆ. ಬೆಳಗ್ಗೆ ಬೇಗ ಬೆಂಗಳೂರು ಸೇರಿದಂತೆ ಹಲವು ದಿಕ್ಕಿನಿಂದ ಬರುವ ವಾಹನಗಳ ಸಂಚಾರಕ್ಕೆ ತೊಡಕಾಯಿತು.

ನಗರದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಸಹಿತ ನಗರದ ಬಹುತೇಕ ಕಡೆಗಳಲ್ಲಿ ನೀರು ನಿಂತಿದ್ದು, ಪಾದಚಾರಿ, ವಾಹನಿಗರು ಸಂಕಷ್ಟಪಡುವಂತಾಗಿದೆ. ನಗರದ ಪಾಂಡೇಶ್ವರ ಸಮೀಪ ಶಿವನಗರ ಸುತ್ತಮುತ್ತಲಿನ ಹಲವು ಮನೆಗಳು ಜಲಾವೃತಗೊಂಡಿವೆ.

ಮನೆಯಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲಾಗದೆ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮುಂಜಾನೆಯಿಂದಲೇ ಗುಡುಗು ಸಹಿತ ಮಳೆಯಾಗಿದೆ. ಕೆಲವು ಕಡೆ ಮರ ಉರುಳಿ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಹಲವೆಡೆ ರಸ್ತೆ ಬದಿ ಪಾರ್ಕ್ ಮಾಡಿದ್ದ ವಾಹಗಳು ಮುಳುಗಿದೆ. ಪಾಂಡೇಶ್ವರ ಶಿವನಗರ ವ್ಯಾಪ್ತಿಯಲ್ಲಿ ನೆರೆ ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಹಲವರು ಪರದಾಟ ನಡೆಸುವಂತಾಯಿತು. ಹಲವು ಮನೆಗಳ ಇಲೆಕ್ಟ್ರಾನಿಕ್ ಸಾಮಾಗ್ರಿಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.

Click Here To View More Photos


Spread the love