ಮೂಲಗೇಣಿ ಮಾಲಕತ್ವ ಸಿಂಧುತ್ವದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್

Spread the love

ಮೂಲಗೇಣಿ ಮಾಲಕತ್ವ ಸಿಂಧುತ್ವದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಕಾಯ್ದೆ ಸಂಖ್ಯೆ 24/2012 ರಂತೆ ರಾಜ್ಯದಲ್ಲಿ ಮೂಲಗೇಣಿದಾರರಿಗೆ ಸಂಪೂರ್ಣ ಹಕ್ಕು ನೀಡುವ ಕುರಿತು ಕರ್ನಾಟಕ ಮೂಲಗೇಣಿ ಅಥವಾ ಒಳಮೂಲಗೇಣಿದಾರರಿಗೆ ಮಾಲಿಕತ್ವವನ್ನು ಪ್ರಧಾನ ಮಾಡುವ ಅಧಿನಿಯಮ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿ ಸಂಖ್ಯೆ 11158/2013 ಮತ್ತು ಇತರ ಅರ್ಜಿಗಳನ್ನು ರಾಜ್ಯ ಉಚ್ಚನ್ಯಾಯಾಲಯ ಸೋಮವಾರ ವಜಾಗೊಳಿಸಿತು.

ರಿಟ್ ಅರ್ಜಿಯನ್ನು ಪ್ರಮುಖವಾಗಿ ಅಧಿನಿಯಮವನ್ನು ರೂಪಿಸಲು ರಾಜ್ಯ ಸರಕಾರಕ್ಕೆ ಇರುವ ಅಧಿಕಾರ, ಅಧಿನಿಯಮದಂತೆ ಕೊಡಮಾಡುವ ಪರಿಹಾರ ಭ್ರಮಿತ / ಭ್ರಮೆ / ಹಾಗೂ ಸಂವಿಧಾನದಲ್ಲಿ ಕಲ್ಪಿಸಲಾದ ಮೂಲಭೂತ ಹಕ್ಕುಗಳ ವಿರುದ್ಧವಾಗಿದೆ ಎಂದು ಪ್ರತಿಪಾದಿಸಲಾಗಿತ್ತು.

ಉಚ್ಚ ನ್ಯಾಯಾಲಯ ಈ ಮೇಲಿನ ಹಾಗೂ ಅಂಶಗಳನ್ನು ಸರ್ವೋಚ್ಚನ್ಯಾಯಾಲಯದ ತೀರ್ಪುಗಳನ್ನು ಪರಿಗಣಿಸಿ ಅಧಿನಿಯಮ ಜಾರಿಗೊಳಿಸಲು ರಾಜ್ಯ ಸರಕಾರಕ್ಕೆ ಅಧಿಕಾರ ಇದೆ, ಪರಿಹಾರ ಭ್ರಮಿತವಲ್ಲ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ ಎಂದು ಕಾನೂನಿನ ಸಿಂಧುತ್ವವನ್ನು ಎತ್ತಿ ಹಿಡಿದಿದೆ. ರಾಜ್ಯ ಸರಕಾರದ ಪರವಾಗಿ ಹಿರಿಯ ವಕೀಲರುಗಳಾದ  ಬಿ.ವಿ. ಆಚಾರ್ಯ ಹಾಗೂ ಬಿ. ಎಲ್. ಆಚಾರ್ಯ ವಾದಿಸಿದ್ದರು. ಮತ್ತು ಮೂಲಗೇಣಿ ಒಕ್ಕೂಟಗಳ ವೇದಿಕೆ ಪರವಾಗಿ ಹಿರಿಯ ನ್ಯಾಯವಾದಿ ಎ. ಜೆ. ಹೊಳ್ಳ ರಿಟ್ ಅರ್ಜಿದಾರರ ಪರವಾಗಿ ಪ್ರಮುಖವಾಗಿ ಹಿರಿಯ ನ್ಯಾಯವಾದಿ ಉದಯ ಹೊಳ್ಳ ವಾದಿಸಿದರು.


Spread the love

1 Comment

  1. no more muldar can claim 1 /3 right of the property ..based on the reference case of the supreme court verdict of KT Plantation which helped us to win the case. They have been given adequate compensation this time as per President Assent.

Leave a Reply

Please enter your comment!
Please enter your name here