
ಮೂಲ್ಕಿ: ಪೋಕ್ಸೊ ಪ್ರಕರಣದ ಆರೋಪಿಗೆ ಕಂಬಕ್ಕೆ ಕಟ್ಟಿ ಹಲ್ಲೆ – ಮೂವರ ಬಂಧನ
ಮಂಗಳೂರು: ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಆರೋಪದ ಮೇಲೆ ಮೂಲ್ಕಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೆರೆಕಾಡು ನಿವಾಸಿ ದಿವ್ಯೇಶ್ ದೇವಾಡಿಗ (38), ರಾಜೇಶ್ ಕೆರೆಕಾಡು ಮತ್ತು ಯೋಗೀಶ್ ಕುಮಾರ್ ಯಾನೆ ಯೋಗಿಸ್ (46) ಎಂದು ಗುರುತಿಸಲಾಗಿದೆ.
ವ್ಯಕ್ತಿಯೋರ್ವ ಬೈಕ್ ನಲ್ಲಿ ಬಾಲಕಿಯನ್ನು ಹಿಂಬಾಲಿಸಿ ಬಂದು ಅಸಭ್ಯವಾಗಿ ವರ್ತಿಸಿದ್ದು ಬಾಲಕಿಯ ತಂದೆಯ ಸ್ನೇಹಿತರಿಬ್ಬರು ಗಮನಿಸಿದ್ದರು. ನಿನ್ನೆ ಶನಿವಾರ ಅದೇ ಪ್ರದೇಶದಲ್ಲಿ ಆರೋಪಿ ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ಕಟ್ಟಿಹಾಕಿ ಹೊಡೆದಿದ್ದರು.
ಬಾಲಕಿ ಪೋಷಕರ ದೂರಿನ ಮೇರೆಗೆ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು ಆರೋಪಿ ದೂರಿನ ಮೇರೆಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಗಲಭೆ ಪ್ರಕರಣ ದೂರು ದಾಖಲಾಗಿದ್ದು ಅದರಂತೆ ಮೂವರನ್ನು ಬಂಧಿಸಿದ್ದಾರೆ.