ಮೂಲ್ಕಿ ಬಳಿ ಅಪಘಾತ, ಇಬ್ಬರ ಸಾವು

Spread the love

ಮೂಲ್ಕಿ ಬಳಿ ಅಪಘಾತ, ಇಬ್ಬರ ಸಾವು
 

ಮೂಲ್ಕಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಪೆಟ್ರೋಲ್ ಪಂಪಿನ ಬಳಿ ಬುಧವಾರ ರಾತ್ರಿ ನಡೆದ ಅಪಘಾತದಲ್ಲಿ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರನ್ನು ಮಧ್ಯ ಪ್ರದೇಶದ ಬಬುಲು (23) ಅಚಲ್ ಸಿಂಗ್ (30) ಎಂದು ಗುರುತಿಸಲಾಗಿದೆ.

ಕೇರಳ ನಿವಾಸಿ ಅನಿಶ್ (42) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧ್ಯಪ್ರದೇಶದ ಇಂದೋರ್ನಿಂದ ಕೇರಳಕ್ಕೆ ಪಡುಪಣಂಬೂರು ಹೆದ್ದಾರಿಯಾಗಿ ಸಾಗುತ್ತಿದ್ದಾಗ ಲಾರಿ ಪಂಕ್ಚರ್ ಆಗಿ ನಿಂತಿತ್ತು. ಇದನ್ನು ದುರಸ್ತಿ ಮಾಡಲು ಲಾರಿಯಲ್ಲಿದ್ದ ಮೂವರು ಸೇರಿ ಇಳಿದಿದ್ದರು. ಟಯರ್ ಬದಲಿಸುವಾಗ ಉಡುಪಿ ಕಡೆಯಿಂದ ಏಕಾಏಕಿ ಬಂದ ಕಾರು ಒಂದು ಮೂವರಿಗೂ ಡಿಕ್ಕಿ ಹೊಡೆದಿದೆ ಡಿಕ್ಕಿಯ ರಭಸಕ್ಕೆ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದು, ಇನ್ನೊಬ್ಬ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿಕ್ಕಿ ಹೊಡೆದ ಕಾರು ನಿಲ್ಲಿಸದೆ ಪರಾರಿಯಾಗಿದೆ. ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.


Spread the love