ಮೆರಿಲ್ ರೇಗೋ ನೇತೃತ್ವದಲ್ಲಿ ಚಾರಿಟಿ ಸಹಾಯಾರ್ಥ ಯುವ ಕಾಂಗ್ರೆಸ್ ಟ್ರೋಫಿ

Spread the love

ಮೆರಿಲ್ ರೇಗೋ ನೇತೃತ್ವದಲ್ಲಿ ಚಾರಿಟಿ ಸಹಾಯಾರ್ಥ ಯುವ ಕಾಂಗ್ರೆಸ್ ಟ್ರೋಫಿ

ಮಂಗಳೂರು: ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೆರಿಲ್ ರೇಗೋ ನೇತೃತ್ವದಲ್ಲಿ ಚಾರಿಟಿ ಸಹಾಯಾರ್ಥ ಆಯೋಜಿಸಿದ ‘ಯುವ ಕಾಂಗ್ರೆಸ್ ಟ್ರೋಫಿ’ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಹಾಗೂ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ ಮಂಗಳವಾರ ಸಂಜೆ ನೆಹರೂ ಮೈದಾನದಲ್ಲಿ ನಡೆಯಿತು.

ಈ ವೇಳೆ ಪಶ್ಚಿಮ್ ಟ್ರಸ್ಟ್ ಸೋಮೇಶ್ವರ ಸಂಸ್ಥೆಗೆ ಧನ ಸಹಾಯವನ್ನು ಹಸ್ತಾಂತರಿಸಲಾಯಿತು. ಪ್ರಥಮ ಸ್ಥಾನ ಪಡೆದುಕೊಂಡ ಎನ್.ಎಂ ಮಂಗಳೂರು ತಂಡಕ್ಕೆ 50 ಸಾವಿರ ನಗದು, ಬಹುಮಾನ ಹಾಗೂ ದ್ವಿತೀಯ ಸ್ಥಾನ ಪಡೆದ ಯಂಗ್ ಫ್ರೆಂಡ್ಸ್ ಗಾಂಧಿನಗರ ತಂಡಕ್ಕೆ 25 ಸಾವಿರ ನಗದು, ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮನಪಾ ವಿರೋಧ ಪಕ್ಷದ ನಾಯಕ ಎ.ಸಿ. ವಿನಯರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಕಾರ್ಪೊರೇಟ್ಗಳಾದ ಲತೀಫ್ ಕಂದಕ್, ಅನಿಲ್ ಕುಮಾರ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುನೀಲ್ ಕುಮಾರ್, ರಾಕೇಶ್ ದೇವಾಡಿಗ, ಪಕ್ಷದ ಮುಖಂಡರಾದ ನಝೀರ್ ಬಜಾಲ್, ಪ್ರಲಾದ್ ಬಿ, ನವಾಝ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here