ಮೆಸ್ಕಾಂ ನೂತನ ಎಂ. ಡಿ ಮಂಜಪ್ಪರವರಿಗೆ ಹಾರ್ದಿಕ ಸ್ವಾಗತ

Spread the love

ಮೆಸ್ಕಾಂ ನೂತನ ಎಂ. ಡಿ ಮಂಜಪ್ಪರವರಿಗೆ ಹಾರ್ದಿಕ ಸ್ವಾಗತ

ಮಂಗಳೂರು: ದ.ಕಜಿಲ್ಲಾ ವಿದ್ಯುತ್ ಗುತ್ತಿಗೆದಾರರ ವತಿಯಿಂದ ನೂತನವಾಗಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಮಂಜಪ್ಪರವರನು ಮೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಗುತ್ತಿಗೆದಾರರ ರಾಜ್ಯ ಉಪಾಧ್ಯಕ್ಷರಾದ ಉರ್ಬನ್ ಪಿಂಟೊ ಶಾಲು ಹೊದಿಸಿ ಗೌರವಿಸಿದರು.

ಬಳಿಕ ಮಾತನಾಡಿ ಇಡೀ ಮೆಸ್ಕಾಂ ಜನಸಾಮಾನ್ಯರಿಗೆ ಹಾಗೂ ವಿದ್ಯುತ್ ಗುತ್ತಿಗೆದಾರರಿಗೆ ಬಹಳ ಸಂತೋಷ ತಂದಿದೆ. ತಮ್ಮಿಂದ ಇಡೀ ಮೆಸ್ಕಾಂ ವ್ಯಾಪ್ತಿಯಲ್ಲಿ ಒಳ್ಳೆಯದಾಗಲಿ.ಎಂದು ಶುಭಹಾರೈಸಿದರು

ಜಿಲ್ಲಾಧ್ಯಕ್ಷರಾದ ಕುಶಾಲ್ ಪೂಜಾರಿ ಮಾತಾನಾಡಿ ದ. ಕ ಜಿಲ್ಲೆಯಲ್ಲಿ ಗ್ರಾಹಕರು ಹಾಗೂ ವಿದ್ಯುತ್ ಗುತ್ತಿಗೆದಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಇವುಗಳನ್ನು ಶ್ರೀಘ್ರ ಪರಿಹರಿಸಲು ವಿನಂತಿಸಿದರು.

ಪ್ರಧಾನ ಕಾರ್ಯದರ್ಶಿ ಸುಶೀಲ್ ನೊರೊನ್ಹಾ ಮಾತಾನಾಡಿ ಈ ಜಿಲ್ಲೆಯಲ್ಲಿ ಗ್ರಾಮಿಣ ಪ್ರದೇಶದಲ್ಲಿ ಹುಟ್ಟಿ ಮೆಸ್ಕಾಂ ಸಹಾಯಕ ಇಂಜಿನಿಯರ್ ಆಗಿ ಸೇವೆಗೆ ಸೇರಿ ಎಲ್ಲಾ ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿ ಇದೀಗ ಅತ್ಯುನ್ನತ ಹುದ್ದೆ ಆಲಂಕರಿಸಿದ ಈ ಜಿಲ್ಲೆಯ ಸುಪುತ್ರ ಇತಿಹಾಸ ನಿರ್ಮಸಿದಾರೆ ಎಂದು ಹೇಳಿದರು.

ಎಂ. ಡಿ ಮಂಜಪ್ಪ ರವರು ಮಾತಾನಾಡಿ ಎಲ್ಲಾ ಸಮಸ್ಯೆಗಳಿಗೆ ಶ್ರೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷರಾದ ರವಿ ಪ್ರಸಾದ್ ಶೆಟ್ಟಿ,ಲಕ್ಶಿನಾರಾಯಣ ಅಡಂತ್ಯಾಯ, ಮೆಸ್ಕಾಂ ಪ್ರತಿನಿಧಿ ಬಾಲಕ್ರಷ್ಣ ಸೆರ್ಕಳ, ಪ್ರವೀಣ್ ಸುವರ್ಣ, ರವಿ ಸುವರ್ಣ, ಪುರುಷೋತ್ತಮ್, ಯೂಸುಫ್, ಸುಬ್ರಹ್ಮಣ್ಯ ಭಟ್ ವಿವೇಕಾನಂದ, ನವೀನ್, ಸುಂದರ ಗೌಡ, ಪದ್ಮನಾಭ, ಗೋಪಾಲ, ರಘುಪತಿ, ಪ್ರಸನ್ನ, ಶಶೀಂದ್ರ ಅಮೀನ್, ಸೂರ್ಯನಾಥಆಳ್ವ ಯಶೋಧರ,ಮತ್ತಿತರು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತಿತರಿದರು


Spread the love